ವಿದ್ಯಾರ್ಥಿಗಳು ಮೊಬಲ್ ಬಳಕೆ ಕಡಿಮೆ ಮಾಡಿ , ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಹೆತ್ತವರು ಗುರು ಹಿರಿಯರನ್ನು ಗೌರವಿಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಕರಾಟೆ ಶಿಕ್ಷಕ ಈಶ್ವರ್ ಕಟೀಲು ಹೇಳಿದರು.
ಕಿನ್ನಿಗೋಳಿ ರಾಜರತ್ನಪುರಲ್ಲಿನ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಸಂಸ್ಥೆಯ ದಾನಿಗಳ ನೆರೆವಿನಿಂದ ಜರಗಿದ ಸ್ಥಳೀಯ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ , ಸಾಧಕ ವಿದ್ಯಾರ್ಥಿಗಳಿಗೆ ಗೌರವ , ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಡಿದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಪಡೆದ ಭವ್ಯ, ಸ್ವಸ್ತಿಕ್ ಕೋಟ್ಯಾನ್, ಲಿಖಿತಾ, ಮಿಥುನ್, ಶ್ರಾವ್ಯ, ಲಿಖಿತಾ ರನ್ನು ಗೌರವಿಸಲಾಯಿತು.
ದ. ಕ. ಜಿಲ್ಲಾ ಬಿಜೆಪಿ ನಾಯಕರಾದ ಕಸ್ತೂರಿ ಪಂಜ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ನಿವೃತ್ತ ಬ್ಯಾಂಕ್ ಪ್ರಬಂಧಕ ಮಂಜುನಾಥ ಮಲ್ಯ, ಗುರುರಾಜ ಮಲ್ಲಿಗೆಯಂಗಡಿ,ಭಾಸ್ಕರ ಪೂಜಾರಿ, ಮೋನಪ್ಪ , ಬೇಬಿ ಕೆಮ್ಮಡೆ, ಮಿನಾಕ್ಷಿ, ಯಶೋದಾ ಮತ್ತಿತರರು ಉಪಸ್ತಿತರಿದ್ದರು.ಅನುಷಾ ಕರ್ಕೇರಾ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
Kshetra Samachara
23/05/2022 02:32 pm