ಕಟೀಲು: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ನ ಸಂಯೋಜನೆಯಲ್ಲಿ ದಿ. ನಾಗಪ್ಪ ಶೆಟ್ಟಿ ಕುಸುಮ ಶೆಟ್ಟಿ ಹಾಗೂ ಕುಟ್ಟಿ ಶೆಟ್ಟಿ ಪ್ರೇಮ ಶೆಟ್ಟಿ ಇವರ ನೆನಪಿನಲ್ಲಿ ಸುಮಾರು ರೂ. 90 ಸಾವಿರ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.
ಕಟೀಲು ದೇಗುಲದ ಆಡಳಿತ ಸಮಿತಿಯ ಸನತ್ ಕುಮಾರ ಶೆಟ್ಟಿ ವಿತರಿಸಿ ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಶ್ಲಾಘನೀಯವಾಗಿದ್ದು ಸದುಪಯೋಗಪಡಿಸಿಕೊಳ್ಳಿ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸರೋಜಿನಿ, ಸೋಮಪ್ಪ ಅಲಂಗಾರು, ಈಶ್ವರ ಕಟೀಲ್. ಲೋಕಯ್ಯ ಸಾಲ್ಯಾನ್, ಚಂದ್ರಶೇಖರ ಭಟ್.ಕ್ಲಬ್ ನ ಕೇಶವ ಕಟೀಲ್. ಮೋಹನ ರಾವ್. ವಿಜಯ ಕುಮಾರ ಶೆಟ್ಟಿ, ರಾಜೇಶ್ ಆಚಾರ್ಯ. ಐವನ್ ಭರತ್, ಅಶೋಕ್ ಮತ್ತಿತರರಿದ್ದರು.
Kshetra Samachara
22/05/2022 05:28 pm