ಮುಲ್ಕಿ: ಕೋವಿಡ್ ಸಂಕಷ್ಟದ ದಿನಗಳಲ್ಲಿ ಮುಲ್ಕಿ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಆನ್ಲೈನ್ ಮೂಲಕ ವೈವಿಧ್ಯ-21 ಪ್ರತಿಭಾ ಸ್ಪರ್ಧೆ ಆಯೋಜಿಸಿ ಶಿಕ್ಷಕರ ಪ್ರತಿಭೆಯನ್ನು ಅನಾವರಣ ಗೊಳಿಸುವ ಮೂಲಕ ಶಿಕ್ಷಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ ಎಂದು ಮುಲ್ಕಿ ರೋಟರಿಕ್ಲಬ್ ಅಧ್ಯಕ್ಷರಾದ ಶಿವರಾಂ ಜಿ ಅಮೀನ್ ಹೇಳಿದರು.
ಅವರು ಶಿಕ್ಷಕರಿಗಾಗಿ ಆನ್ಲೈನ್ ಸ್ಪರ್ಧೆ ವೈವಿಧ್ಯ - 2021 ರಲ್ಲಿ ಭಾಗವಹಿಸಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ನಿವೃತ್ತ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೀತಾರಾಮ್ ಆಚಾರ್, ರೋಟರಿ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ, ರೊ. ನಾರಾಯಣ್, ಶಾರದಾ ಇನ್ಫ್ರಾರೆಡ್ ಡಿಸೈನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಜೀವನ್ ಕೆ. ಶೆಟ್ಟಿ, ಕಾರ್ಯಕ್ರಮದ ನಿರ್ದೇಶಕ ಅಬ್ಬಾಸ್ ಆಲಿ, ಕಾರ್ಯದರ್ಶಿ ರವಿಚಂದ್ರ, ಮಲ್ಲಿಕಾರ್ಜುನ ಆರ್.ಕೆ.
ಉಪಸ್ಥಿತರಿದ್ದರು.
ಜಿನರಾಜ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಾಜಾ ಪತ್ರಾವೊ ಧನ್ಯವಾದ ಅರ್ಪಿಸಿದರು
ವೈಯುಕ್ತಿಕ ಹಾಡು (ಭಾವಗೀತೆ)
ಪದ್ಮಿನಿ,ತೋಕೂರು ತಪೋವನ ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ಮಾಲತಿ, ಬೆಥನಿ ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ (ದ್ವಿತೀಯ), ಉಮೇಶ್ ಕೆ, ಎಸ್.ಎನ್.ಜಿ ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ (ತೃತೀಯ), ಜಯಶ್ರೀ ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆ ಕಾರ್ನಾಡು ಮುಲ್ಕಿ(ಸಮಾಧಾನಕರ ಬಹುಮಾನ)
ವೈಯುಕ್ತಿಕ ನೃತ್ಯ(ಜಾನಪದ)
ಹರಿಶ್ಚಂದ್ರ ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆ ಕಾರ್ನಾಡ್ (ಪ್ರ), ಅಶ್ವಿತಾ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮ ಶಾಲೆ ಕಿಲ್ಪಾಡಿ (ದ್ವಿ), ಶ್ವೇತ ರಾಣಿ ಎಸ್ ಎನ್ ಜಿ ಆಂಗ್ಲ ಮಾಧ್ಯಮ ಶಾಲೆ( ತೃ), ಪ್ರಿಯಾ ಎಂ, ತೋಕೂರು ತಪೋವನ ಆಂಗ್ಲ ಮಾಧ್ಯಮ ಶಾಲೆ(ಸಮಾಧಾನಕರ ಬಹುಮಾನ)
ಭಾಷಣ
ವಾಣಿ ಎಂ.ಸುವರ್ಣ, ಎಸ್ ಎನ್.ಜಿ. ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ, (ಪ್ರ), ಹರೀಶ ಎಂ.ಸಿ. ಟಿ. ಪಬ್ಲಿಕ್ ಸ್ಕೂಲ್ ಕೆಎಸ್ ರಾವ್ ನಗರ,( ದ್ವಿ), ವಿನೋಲ ಸಿಲ್ವಿಯಾ ಪಿಂಟೊ,ಎಸ್.ಎನ್.ಎಸ್. ಜೂನಿಯರ್ ಕಾಲೇಜ್ ಹಳೆಯಂಗಡಿ (ತೃ), ಜಯಲಕ್ಷ್ಮಿ ವ್ಯಾಸಮಹರ್ಷಿ ಸ್ಕೂಲ್ ಕಿಲ್ಪಾಡಿ (ಸಮಾಧಾನಕರ ಬಹುಮಾನ),
ಏಕಪಾತ್ರಾಭಿನಯ ಸ್ಪರ್ಧೆ
ಶ್ರೀಲಕ್ಷ್ಮಿ ಕಾಮತ್, ವ್ಯಾಸಮಹರ್ಷಿ ಆಂಗ್ಲ ಮಾಧ್ಯಮ ಶಾಲೆ(ಪ್ರ), ಸುರೇಶ್ ಎಂ.ಸಿ. ಟಿ ಪಬ್ಲಿಕ್ ಸ್ಕೂಲ್, (ದ್ವಿ), ಸಾವಿತ್ರಿ ಭಟ್, ಎಸ್.ಎನ್.ಜಿ. ಆಂಗ್ಲ ಮಾಧ್ಯಮ ಶಾಲೆ (ತೃ), ಸೀಮಾ, ತಪೋವನ ತೋಕೂರು (ಸಮಾಧಾನಕರ ಬಹುಮಾನ)
ಶಿಕ್ಷಕರಿಗೆ ಆನ್ಲೈನ್ ಕ್ಲಾಸ್ ಸ್ಪರ್ಧೆ
ದೇವಿಕಾ ವ್ಯಾಸಮಹರ್ಷಿ ಕಿಲ್ಪಾಡಿ (ಪ್ರ), ತೇಜಾಕ್ಷಿ ತೋಕೂರು ತಪೋವನ,( ದ್ವಿ), ಬಬಿತಾ ಎಂಸಿಟಿ ಪಬ್ಲಿಕ್ ಸ್ಕೂಲ್, (ತೃ) ಭಾರತೀ ,ಶ್ರೀ ನಾರಾಯಣ ಗುರು ಮುಲ್ಕಿ, (ಸಮಾಧಾನಕರ ಬಹುಮಾನ).
Kshetra Samachara
16/09/2021 10:46 am