ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "N.S.S. ನಿಂದ ಸರ್ವಧರ್ಮ ಮನೋಭಾವ, ನಾಯಕತ್ವ ಗುಣ ವಿಶೇಷ ಲಭ್ಯ"

ಮುಲ್ಕಿ: ಮುಲ್ಕಿಯ ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2020- 21 ರ ಸಾಲಿನ ಉದ್ಘಾಟನೆ ಶುಕ್ರವಾರ

ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಹಾಸ್ ಹೆಗ್ಡೆ ವಹಿಸಿದ್ದರು. ಎನ್ ಎಸ್ ಎಸ್ ಘಟಕವನ್ನು ಸ್ವಸ್ತಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಎನ್. ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಯಿಂದ ಸರ್ವಧರ್ಮ ಮನೋಭಾವ ಸಾಧ್ಯ. ಎನ್ಎಸ್ಎಸ್ ನಿಂದ ಉತ್ತಮ ನಾಯಕತ್ವದ ಗುಣಗಳನ್ನು ಪಡೆಯುವುದರ ಜೊತೆಗೆ ಸಮಾಜದ ಆಸ್ತಿ ಆಗಬಹುದು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಕೆ. ನಾರಾಯಣ ಪೂಜಾರಿ ಶುಭಾ ಶಂಸನೆಗೈದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ವಿಜಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಪಮೀದಾ ಬೇಗಂ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸಂಪತ್ ಕುಮಾರ್, ಕಾಲೇಜಿನ ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿ ಜಿತೇಂದ್ರ ವಿ. ರಾವ್, ಕಾರ್ಯದರ್ಶಿ ವಂದನಾ, ಶ್ರವಣ್, ಸುಧೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಎನ್ಎಸ್ಎಸ್ ಕಾರ್ಯದರ್ಶಿ ವಂದನಾ ಸ್ವಾಗತಿಸಿದರು. ಸುಧೀರ್ ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

06/02/2021 10:19 am

Cinque Terre

7.35 K

Cinque Terre

0

ಸಂಬಂಧಿತ ಸುದ್ದಿ