ಮುಲ್ಕಿ : ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಲು ಮತ್ತು ಸುಪ್ತ ಪ್ರತಿಭೆಯನ್ನು ಹೊರತರಲು ಪ್ರತಿಭಾ ಸೌರಭ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕರಾದ ವೇ.ಮೂ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ಪ್ರತಿಷ್ಠಾನ (ರಿ.) ಆಶ್ರಯದಲ್ಲಿ ಹಾಗೂ ಜನವಿಕಾಸ ಸಮಿತಿ ಮುಲ್ಕಿ ಇದರ ಸಹಕಾರದಲ್ಲಿ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ ಪ್ರತಿಭಾ ಸೌರಭ – ೨೦೨೦-೨೧ನ್ನು ಉದ್ಘಾಟಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನ (ರಿ)ದ ಗೌರವ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೊಡೆತ್ತೂರು ಭುವನಾಭಿರಾಮ ಉಡುಪ, ಕಟೀಲು- ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮುಲ್ಕಿ ವಲಯದ ಅಧ್ಯಕ್ಷ ನವೀನ್ ಚಂದ್ರ, ಪುನರೂರು ಪ್ರತಿಷ್ಠಾನ (ರಿ) ಗೌರವ ಅಧ್ಯಕ್ಷೆ ಎಚ್.ಕೆ ಉಷಾರಾಣಿ, ಮುಲ್ಕಿ ಜನ ವಿಕಾಸ ಸಮಿತಿ ಅಧ್ಯಕ್ಷ ಜೀವನ್ ಶೆಟ್ಟಿ ಹಾಗೂ ಜನವಿಕಾಸ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನ (ರಿ) ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ಮುಲ್ಕಿ ಜನವಿಕಾಸ ಸಮಿತಿ ಪ್ರಧಾನ ಕಾರ್ಯದರ್ಶಿ ಶೋಭಾರಾವ್ ವಂದಿಸಿದರು. ಜಿತೇಂದ್ರ ವಿ ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
11/01/2021 10:26 am