ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಾದ ಶ್ರೀಜಾ ಹೆಬ್ಬಾರ್ ಮತ್ತು ಸ್ವಸ್ತಿ ಅವರು 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶ್ರೀಜಾ ಹೆಬ್ಬಾರ್ (ರೋಟರಿ ಶಾಲೆ) ರಾಘವೇಂದ್ರ ಹೆಬ್ಬಾರ್ ಕಬ್ಬಿನಾಲೆ ಹಾಗೂ ಶುಭ ಹೆಬ್ಬಾರ ದಂಪತಿಗಳ ಸುಪುತ್ರಿ. 625 ಅಂಕ ಪಡೆಯುವ ನಿರೀಕ್ಷೆ ಹೊಂದಿದ್ದೆ. ಮನೆಯಲ್ಲಿ ಪ್ರತಿದಿನ ವಿಶೇಷ ರೀತಿಯಲ್ಲಿ ಅಭ್ಯಾಸ ಮಾಡಿದ್ದೇ ಈ ಸಾಧನೆಗೆ ಕಾರಣ ಎಂದಿದ್ದಾರೆ.
ಯಾವುದೇ ಹೆಚ್ಚುವರಿ ತರಬೇತಿಗಳನ್ನು ಹೊರಗಡೆ ಪಡೆದಿಲ್ಲ. ಶಾಲೆಯ ಶಿಕ್ಷಣ, ಮನೆಯ ಹಿರಿಯ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ಇಂಜಿನಿಯರಿಂಗ್ ಮಾಡುವ ಆಶೆ. ಬಾಲ್ಯದಿಂದಲೂ ಕಲಿಕೆ,ಡ್ರಾಯಿಂಗ್,ಕ್ಲೇ ಮಾಡಲಿಂಗ್,ಡ್ಯಾನ್ಸ್ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.
ಸ್ವಸ್ತಿ (ರೋಟರಿ ಶಾಲೆ) ಸಂತೋಷ್ ಕುಮಾರ್ ಹಾಗೂ ಸೌಜನ್ಯ ದಂಪತಿಗಳ ಸುಪುತ್ರಿ. ಶಾಲಾ ಶಿಕ್ಷಣದ ಜೊತೆಗೆ ಹೆಚ್ಚುವರಿ ತರಬೇತಿ ಪಡೆದು, ನಿರಂತರ ಅಭ್ಯಾಸದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರಿಯವ ಆಶೆಯಿದೆ ಎಂದು ತಿಳಿಸಿದ್ದಾರೆ.
Kshetra Samachara
19/05/2022 10:07 pm