ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ವಿದ್ಯಾದಾಯಿನಿ ಸಂಘ ಸ್ಥಾಪಕ ದಿನಾಚರಣೆ, ಸನ್ಮಾನ

ಮುಲ್ಕಿ: ಶತಮಾನದ ಇತಿಹಾಸ ಇರುವ ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಸ್ಥಾಪಕ ದಿನಾಚರಣೆ ವಿದ್ಯಾ ದಾಯಿನಿ ಪ್ರೌಢಶಾಲೆಯ ಅಮೃತ ಮಹೋತ್ಸವ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಸ್ಥಾಪಕರಿಗೆ ಪುಪ್ಪಾರ್ಚನೆ ಸಲ್ಲಿಸಲಾಯಿತು. ಸಂಘದ ಕಾರ್ಯದರ್ಶಿ ಎಂ.ವೆಂಕಟ್ರಾವ್, ಸಂಘ 103 ವರ್ಷ ಬೆಳೆದು ಬಂದ ಬಗೆ ವಿವರಿಸಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದವರನ್ನು ಸ್ಮರಿಸಿದರು.

ಅಧ್ಯಕ್ಷ ಇ.ಜನಾರ್ದನ್ ಮಾತನಾಡಿ, ಮುಂದಿನ ಸವಾಲು, ಸ್ಪರ್ಧೆ ಎದುರಿಸಲು ಹಿಂದೂ ವಿದ್ಯಾದಾಯಿನಿ ಸಂಘ ದಿಟ್ಟ ಹೆಜ್ಜೆಯನ್ನಿಡಲಿದೆ.

ಶಾಲಾ, ಕಾಲೇಜಿನ ನೂರಾರು ವಿದ್ಯಾರ್ಥಿಗಳು ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಹೆಸರು ಬೆಳಗಿಸಿರುವುದು ಹೆಮ್ಮೆ ತಂದಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು,ನಿವೃತ್ತ ಶಿಕ್ಷಕರು,ಉಪನ್ಯಾಸಕರನ್ನು ಗೌರವಿಸಲಾಯಿತು ಹಾಗೂ ವಿದ್ಯಾದಾಯಿನಿ. ಇನ್ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.

ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘ ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಟ್ಯಾಬ್ ಖರೀದಿಗಾಗಿ 6 ಲಕ್ಷ ರೂ. ಹಸ್ತಾಂತರಿಸಲಾಯಿತು.

ಆಡಳಿತ ಮಂಡಳಿಯ ರತ್ನಾಕರ ರಾವ್, ಸಂಘದ ಕೋಶಾಧಿಕಾರಿ ಎಚ್.ಎಲ್.ರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಎಚ್, ವಿದ್ಯಾದಾಯಿನಿ ಸಮೂಹ ಶಾಲಾ, ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿಗಳು,ಪ್ರಾಂಶುಪಾಲರು, ಶಿಕ್ಷರು ಉಪಸ್ಥಿತರಿದ್ದರು.

ಟಿ.ಎನ್. ರಮೇಶ್ ಸ್ವಾಗತಿಸಿದರು, ಸಂಘದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾಕರ ರಾವ್ ಪೇಜಾವರ ನಿರೂಪಿಸಿದರು.

ಶ್ರೀರಂಗ ಎಚ್. ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

30/11/2020 12:00 pm

Cinque Terre

3.55 K

Cinque Terre

0

ಸಂಬಂಧಿತ ಸುದ್ದಿ