ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ತುಳು ಲಿಪಿ ಬರಹ ಕಾರ್ಯಾಗಾರ ; ಚಿಣ್ಣರೂ ಉತ್ಸಾಹದಿಂದ ಭಾಗಿ

ಮುಲ್ಕಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡು ಸಹಯೋಗದಲ್ಲಿ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಹಳೆಯಂಗಡಿ ಸಂಯೋಜನೆಯಲ್ಲಿ ತುಳು ಲಿಪಿ ಬರಹ ಕಲಿಕೆಯ ಮೊದಲ ತರಗತಿ ಕಾರ್ಯಾಗಾರ ಭಾನುವಾರ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು.

ತುಳು ಲಿಪಿ ಶಿಕ್ಷಕರಾದ ಕಿರಣ್ ತುಳುವ ಮತ್ತು ದೀಕ್ಷಿತಾ ಮಧ್ಯ ಅವರು ತರಗತಿ ನಡೆಸಿ ಕೊಟ್ಟರು.

ತರಗತಿಯಲ್ಲಿ ಸಂಸ್ಥೆ ಸದಸ್ಯರು, ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದು, 52 ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಕೆಗೆ ಉತ್ಸಾಹ ತೋರಿದರು.

ಕರಾಟೆ ತರಗತಿಯ ವಿದ್ಯಾರ್ಥಿ ಮಾಸ್ಟರ್ ವೃಶಾಂಕ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಪೋಷಕರಾದ ಸಂಸ್ಥೆಯ ಮಹಿಳಾ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷೆ ವಾಣಿ ಮಹೇಶ್ ಮತ್ತು ಸಂಸ್ಥೆಯ ಸಮಿತಿ ಸದಸ್ಯ ಮಹೇಶ್ ಸುವರ್ಣ ಉಚಿತವಾಗಿ ಪುಸ್ತಕ, ಪೆನ್ ವಿದ್ಯಾರ್ಥಿಗಳಿಗೆ ವಿತರಿಸಿದರು.

ಸಂಸ್ಥೆ ಅಧ್ಯಕ್ಷ ಸಂತೋಷ್ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು. ಕಾರ್ಯಕಾರಿ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

02/11/2020 09:49 am

Cinque Terre

4.94 K

Cinque Terre

0

ಸಂಬಂಧಿತ ಸುದ್ದಿ