ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಲಲಿತ ಕಲಾ ಸಂಘದ ಆಸರೆಯಲ್ಲಿ ಪ.ಪೂ ಕಾಲೇಜು ಪ್ರೌಢಶಾಲೆ ಪ್ರಾಥಮಿಕ ಶಾಲೆ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಚಿತ್ರ ತರಬೇತಿ ಶಿಬಿರ ನಡೆಯಿತು.
ಚಿತ್ರಕಲೆಯಲ್ಲಿ ಪ್ರತಿಭಾನ್ವಿತರಾದ ವಿದ್ಯಾರ್ಥಿಗಳು ನೂರಕ್ಕೂ ಹೆಚ್ಚು ಗ್ಲಾಸ್ ಕ್ಯಾನ್ವಾಸ್ ಪೈಂಟಿಂಗ್ ಗಳನ್ನು ಮಾಡಿದರು.
ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಗತರಿಗೆ ವಿದ್ಯಾರ್ಥಿಗಳು ರಚಿಸಿದ ಚಿತ್ರಗಳನ್ನೇ ಸ್ಮರಣಿಕೆಯಾಗಿ ನೀಡಲಾಗುತ್ತಿದೆ.
Kshetra Samachara
04/10/2022 05:15 pm