ಮುಲ್ಕಿ:ತೋಕೂರು ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರ ಕನ್ನಡಕ ವಿತರಣೆ ಹಾಗೂ ನೂತನ ರೋಟರಿ ಸಮುದಾಯ ದಳ ಪದಗ್ರಹಣ ಕಾರ್ಯಕ್ರಮ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನುಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ರವರು ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಮತ್ತು ಸಮಾಜದ ಬಡಜನರ ಅಶೋತ್ತರಗಳಿಗೆ ಸ್ಪಂದಿಸುವಲ್ಲಿ ರೋಟರಿ ಸಮುದಾಯ ದಳಗಳ ಪಾತ್ರ ಮಹತ್ತರವಾದುದು ಎಂದರು
ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷ ಗುರುರಾಜ ಎಸ್ ಪೂಜಾರಿ, ರೋಟರಿ ಡಿಸ್ಟ್ರಿಕ್ಟ್ ನ ಸದಾಶಿವ ಶೆಟ್ಟಿ, ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷ ಭಾಸ್ಕರ್ ಅಮೀನ್ ಕಾರ್ಯದರ್ಶಿ ಹಿಮಕರ ಕೋಟ್ಯಾನ್ ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್
ರೋಟರಿ ಕ್ಲಬ್ ಬೈಕಂಪಾಡಿ ಕಾರ್ಯದರ್ಶಿ ರೊಟೇರಿಯನ್ ಹರೀಶ್ ಬಿ ಶೆಟ್ಟಿ, ಶ್ರೀನಿವಾಸ್ ಆಸ್ಪತ್ರೆ ಮುಕ್ಕ ದ ದಂತ ವೈದ್ಯಾಧಿಕಾರಿ ಡಾ. ಶ್ರೀ ವಿದ್ಯಾ ಉಪಸ್ಥಿತರಿದ್ದರು.
Kshetra Samachara
03/10/2022 10:32 am