ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಳಿಂಜೆ: ಉಚಿತ ಮಲ್ಲಿಗೆ ಕೃಷಿ ತರಬೇತಿ ಶಿಬಿರ

ಮುಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಳಿಂಜೆ ದಾಬ ಪೂಜಾರಿಯವರ ಮನೆಯಲ್ಲಿ ಉಚಿತ ಮಲ್ಲಿಗೆ ಕೃಷಿ ತರಬೇತಿ ನಡೆಯಿತು.

ಈ ಸಂದರ್ಭ ಕೃಷಿ ಅಧಿಕಾರಿ ಐತಪ್ಪ ನವರು ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ನೀಡಿ ಕೃಷಿ ಪ್ರೋತ್ಸಾಹಿಸಿ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ಇಳುವರಿ ಪಡೆಯಿರಿ ಎಂದರು.

ಮೇಲ್ವಿಚಾರಕ ನವೀನ್, ಸಿ ಎಚ್ ಸಿ ಕೃಷಿ ಯಂತ್ರ ಧಾರೆಯ ಪ್ರಬಂಧಕ ಸಂದೇಶ್ ಹಾಗೂ ಏಳಿಂಜೆ ಒಕ್ಕೂಟ ಅಧ್ಯಕ್ಷೆ ಪದ್ಮಿನಿ ವಸಂತ್, ಸೇವಾ ಪ್ರತಿನಿಧಿ ಲೀಲಾ ಪ್ರಸನ್ನ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡರು.

Edited By : PublicNext Desk
Kshetra Samachara

Kshetra Samachara

26/09/2022 07:11 am

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ