ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಸಾವಿರ ವರ್ಷಗಳ ಲೂಟಿಯಿಂದ ಬಡತನ:ಸೇತೂರಾಮ್ 

ಕಟೀಲು :ನಮ್ಮ ದೇಶ ಯಾರ ಮೇಲೂ ಆಕ್ರಮಣ ಮಾಡಿಲ್ಲ. ಆದರೆ ನಮ್ಮ ದೇಶದ ಮೇಲಿನ ಸಾವಿರ ವರ್ಷಗಳ ಲೂಟಿಯಿಂದ ಬಡತನದ ಸ್ಥಿತಿ ಬಂದಿದೆ ಎಂದು ರಂಗನಟ, ಖ್ಯಾತ ಚಿಂತಕ ಎಸ್.ಎನ್. ಸೇತೂರಾಮ್ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವಕಾಲೇಜಿನಲ್ಲಿ ಕಟೀಲು ಶಿಕ್ಷಣ ಸಮೂಹ ಸಂಸ್ಥೆಗಳ ಗುರುವಂದನೆಯಲ್ಲಿ ಮಾತನಾಡಿದರು. ಪಠ್ಯಗಳ ಹೊರತಾದ ನಿಜವಾದ ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು. ಅಬ್ಬಕ್ಕ ಚೆನ್ನಮ್ಮನಂತಹ ರಾಣಿಯರು  ಹೋರಾಟ ಮಾಡಿದರು ಎಂದರೆ ನಮ್ಮಲ್ಲಿ ಸ್ತ್ರೀಸ್ವಾತಂತ್ರ್ಯ ಇತ್ತು ಎಂದರ್ಥ. ದುಡಿದು ತಿನ್ನಬೇಕು ಬದಲಾಗಿ ದೋಚುವುದಲ್ಲ. ನಾನು ಬಡತನವನ್ನೂ ಕಂಡವನು. ನಮ್ಮ ಉಟ್ಟ ಉಡುಗೆಗಳು ಚೆನ್ನಾಗಿಲ್ಲವೆಂದು ಮನೆಯ ಕಾರ್ಯಕ್ರಮಗಳಲ್ಲಿ ಪೋಟೊ ತೆಗೆಸಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದ ಕಾಲ ಇವತ್ತು ಹಾದಿಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುವಾಗ ಪಕ್ಕನೆ ಯಾರೋ ನಿಲ್ಲಿಸಿ ಸೆಲ್ಫಿ ಪ್ಲೀಸ್ ಎಂದು ಪೋಟೋ ತೆಗೆಸಿಕೊಳ್ಳುವಂತಹ ರೀತಿಯಲ್ಲಿ ಬದಲಾಗಿದೆ. ಬದುಕಿನ ಸೋಲಿನಂತೆ ಗೆಲುವೂ ಕೂಡ ಅನುಭವ ಆಗುತ್ತದೆ. ರಾಮಾಯಣ ಮಹಾಭಾರತಗಳನ್ನು ಕಥೆಯಾಗಿ ಓದಬೇಕು ಎಂದು ಸೇತುರಾಮ್ ಹೇಳಿದರು.

ಸೇತೂರಾಮ್ ಹಾಗೂ ನಿವೃತ್ತ ಉಪನ್ಯಾಸಕರಾದ ನಿರೇಂದ್ರ ಎ, ಗೋಪಿನಾಥ ಹೆಗ್ಡೆ,  ವಿಜಯಾ ಆಳ್ವರನ್ನು ಸಂಮಾನಿಸಲಾಯಿತು. 

ಕಟೀಲಿನ ಆರೂ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು ಗೌರವಿಸಲಾಯಿತು. ವಿವಿದ ಸ್ಪರ್ಧಾ ವಿಜೇತ ಶಿಕ್ಷಕರಿಗೆ ಬಹುಮಾನ ನೀಡಲಾಯಿತು. 

ಕಟೀಲು ದೇಗುಲದ ಆಡಳಿತ ಸಮಿತಿಯ ಅಧ್ಯಕ್ಷ  ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ. ಅರ್ಚಕರಾದ ಪ್ರಸಾದ ಆಸ್ರಣ್ಣ. ಶ್ರೀಹರಿ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ. ಮೋಹನ್ ರಾವ್. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಕೃಷ್ಣ ಕಾಂಚನ್. ಚಂದ್ರಶೇಖರ ಭಟ್, ಸೋಮಪ್ಪ ಅಲಂಗಾರು ಸರೋಜಿನಿ. ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಹಾಗೂ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳಿದ್ದರು. 

ಪ್ರಾಚಾರ್ಯೆ ಕುಸುಮಾವತಿ ಸ್ವಾಗತಿಸಿದರು  ಸಂತೋಷ್ ಆಳ್ವ, ರಾಜಶೇಖರ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

13/09/2022 08:59 pm

Cinque Terre

1.26 K

Cinque Terre

1

ಸಂಬಂಧಿತ ಸುದ್ದಿ