ಮುಲ್ಕಿ: ಭಾರತ ದೇಶವು 75 ವರ್ಷದಸ್ವಾತಂತ್ರ್ಯೋತ್ಸವ ಆಚರಣೆ ಅಂಗವಾಗಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಕುಳಿತ ಮನೆ, ಸ್ವಾತಂತ್ರ್ಯ ಯೋಧರಾದ ದೇಶಭಕ್ತ ಕಾರ್ನಾಡು ಸದಾಶಿವ ರಾಯರು ಹಾಗೂ ರಾಮಕೃಷ್ಣ ಪೂಂಜ ಸ್ಮರಣೆಯ ಕಾರ್ಯಕ್ರಮ ಕಾರ್ನಾಡ್ ದಿ. ರಾಮಕೃಷ್ಣ ಪೂಂಜಾ ಮನೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ದೇಶಭಕ್ತರ ಬಲಿದಾನದ ಮೂಲಕ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು ಯುವ ಜನಾಂಗ ಹಿರಿಯರ ಆದರ್ಶಗಳನ್ನು ಪಾಲಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಪೂಂಜಾ ಚಾರಿಟೇಬಲ್ ಟ್ರಸ್ಟ್ ನ ಆದಿತ್ಯ ಪೂಂಜಾ, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಮುರಳೀಧರ ಭಂಡಾರಿ ಕುಬೇವೂರು, ರಂಗನಾಥ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಅಭಿಲಾಶ್ ಶೆಟ್ಟಿ ಕಟೀಲ್, ಸತೀಶ್ ಅಂಚನ್, ಡಾ. ಶರತ್ ಶೆಟ್ಟಿ, ವಿಟ್ಟಲ್ ಎನ್ ಎಂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/08/2022 03:49 pm