ಮುಲ್ಕಿ: ವೃತ್ತಿ ಧರ್ಮದ ಬಗ್ಗೆ ಕೀಳರಿಮೆ ಇರಿಸದೆ ಮಕ್ಕಳನ್ನು ಶೈಕ್ಷಣಿಕ ಸಾಧಕರನ್ನಾಗಿಸುವಲ್ಲಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಹಿರಿಯ ವಕೀಲ ಭಾಸ್ಕರ ಹೆಗ್ಡೆ ಹೇಳಿದರು.
ಮೂಲ್ಕಿ ಆಧಿಧನ್ ಸಭಾಂಗಣದಲ್ಲಿ ಮುಲ್ಕಿ ಅಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಶೈಕ್ಷಣಿಕ ಉನ್ನತಿಗಾಗಿ ಸರಕಾರ ವಿವಿಧ ಸಹಾಯ ಯೋಜನೆಗಳನ್ನು ನೀಡಿದೆ ಮಕ್ಕಳ ಶಿಕ್ಷಣಕ್ಕಾಗಿ ಸಮಾಜ ದೊಡ್ಡ ಮಟ್ಟಿನಲ್ಲಿ ಶೈಕ್ಷಣಿಕ ಸಹಕಾರ ನೀಡುತ್ತದೆ.ನಾವು ಮುತುವರ್ಜಿ ವಹಿಸಿ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಮಕ್ಕಳು ಶೈಕ್ಷಣಿಕ ಸಾಧಕರಾಗುವಂತೆ ಪ್ರೇರೇಪಿಸಬೇಕು ಎಂದರು.
ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಲಾವಣ್ಯ,ಅನ್ವಿತಾ ಎಸ್ ಶೆಟ್ಟಿ,ಯತಿನ್ ವಿ ಪೂಜಾರಿ,ಧನ್ಯ. ದ್ವಿತೀಯ ಪಿಯುಸಿಯ ಹರ್ಷಿತ್ ಶೆಟ್ಟಿ, ರಕ್ಷಿತಾ,ತೇಜಸ್ವಿನಿ ಯವರನ್ನು ಗೌರವಿಸಲಾಯಿತು.
ದಾನಿಗಳು ಹಾಗೂ ಹಿರಿಯ ರಿಕ್ಷಾ ಚಾಲಕರನ್ನು ಅಭಿನಂದಿಸಲಾಯಿತು. ಮುಲ್ಕಿ ಅಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ದೇವರಾಜ್ ಕೊಲಕಾಡಿ, ಗೌರವ ಅಧ್ಯಕ್ಷ ಭಾಸ್ಕರ ಹೆಗ್ಡೆ,ನಾಗರಾಜ್ ಕೊಲಕಾಡಿ ಮತ್ತು ಹಿರಿಯ ರಿಕ್ಷಾ ಚಾಲಕರು ವೇದಿಕೆಯಲ್ಲಿದ್ದರು. ಸತೀಶ್ ಕೋಟ್ಯಾನ್ ಸ್ವಾಗತಿಸಿದರು. ಶ್ರೀನಿವಾಸ್ ಕೋಟ್ಯಾನ್ ನಿರೂಪಿಸಿದರು.
Kshetra Samachara
07/08/2022 07:16 pm