ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಮುಂದಿನ ಅ.17 ರಂದು ಸಿಂಹ ಸಂಕ್ರಮಣದ ದಿನದಂದು ಕ್ಷೇತ್ರದಲ್ಲಿ ಲಕ್ಷ ತುಳಸಿ ಅರ್ಚನೆ ನಡೆಯಲಿದ್ದು ಗ್ರಾಮಸ್ಥರ ಸಹಕಾರ ಅಗತ್ಯ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ ಹೇಳಿದರು.
ಅವರು ದೇವಸ್ಥಾನದಲ್ಲಿ ಮುಂದಿನ ತಿಂಗಳು ನಡೆಯಲಿರುವ ಲಕ್ಷ ತುಳಸಿ ಅರ್ಚನೆಯ ಪ್ರಯುಕ್ತ ಗ್ರಾಮಸ್ಥರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರದ ಅರ್ಚಕ ಪುರುಷೋತ್ತಮ್ ಭಟ್ ಆಶೀರ್ವಚನ ನೀಡಿ ಲಕ್ಷ ತುಳಸಿ ಅರ್ಚನೆ ಮೂಲಕ ಕ್ಷೇತ್ರದ ಸಾನಿಧ್ಯ ವೃದ್ಧಿ ಜೊತೆಗೆ ಗ್ರಾಮದ ಅಭಿವೃದ್ಧಿ ಸಾದ್ಯ ಎಂದರು.
ಈ ಸಂದರ್ಭ ಸೀತಾರಾಮ್ ಭಟ್, ಅತಿಕಾರಿಬೆಟ್ಟು ಗ್ರಾಪಂ ಸದಸ್ಯೆ ಪದ್ಮಿನಿ ಶೆಟ್ಟಿ, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ,ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಶಶಿಕಲಾ ಎನ್.ಕುಂದರ್, ಕಲ್ಪನಾ ಪಿ ಬಲ್ಲಾಳ್, ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ ಅಧಿಧನ್, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಪ್ರಬಂಧಕ ಕಿಶೋರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮೋಹನ್ ಕೋಟ್ಯಾನ್ ನಿರೂಪಿಸಿದರು.
Kshetra Samachara
16/07/2022 01:04 pm