ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: ಶ್ರೀ ಧರ್ಮಸ್ಥಾನದ ನವೀಕರಣಗೊಳ್ಳಲಿರುವ ಗೋಪುರಕ್ಕೆ ಶಿಲಾನ್ಯಾಸ

ಮುಲ್ಕಿ: ಕಾರ್ನಾಡ್ ಶ್ರೀ ಧರ್ಮಸ್ಥಾನದ ನವೀಕರಣಗೊಳ್ಳಲಿರುವ ಗೋಪುರಕ್ಕೆ ಶಿಲಾನ್ಯಾಸ ಶುಕ್ರವಾರ ನಡೆಯಿತು.

ಆಡಳಿತ ಸಮಿತಿ ಅಧ್ಯಕ್ಷರಾದ ಎಮ್ ಎಚ್ ಅರವಿಂದ ಪೂಂಜ ಮಾತನಾಡಿ ನೂತನ ಗೋಪುರ ನಿರ್ಮಾಣಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಾಜೀ ಅಧ್ಯಕ್ಷರುಗಳಾದ ಸುನಿಲ್ ಆಳ್ವ ಶಶಿಕಾಂತ ಶೆಟ್ಟಿ, ಸದಸ್ಯರಾದ ಪುತ್ತು ಬಾವ ,ಹರ್ಷರಾಜ ಶೆಟ್ಟಿ,ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಶರತ್ ಸಾಲ್ಯಾನ್, ವಿಠಲ ಅಮೀನ್, ಜಗದೀಶ್ ಶೆಟ್ಟಿ, ಪಾಂಡು ಎ ಕಾರ್ನಾಡ್, ವಿಷ್ಣುಮೂರ್ತಿ ಭಟ್, ಹರಿಶ್ಚಂದ್ರ ಪಿ ಸಾಲ್ಯಾನ್, ಅರ್ಚಕ ಸದಾನಂದ ಪೂಜಾರಿ, ಕಾರ್ನಾಡ್ ಧರ್ಮಸ್ಥಾನದ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಸುಮಾರು 60 ಲಕ್ಷ ವೆಚ್ಚದಲ್ಲಿ ನೂತನ ಗೋಪುರದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

08/07/2022 08:46 pm

Cinque Terre

3.7 K

Cinque Terre

0

ಸಂಬಂಧಿತ ಸುದ್ದಿ