ಸುರತ್ಕಲ್:ಎಂ,ಅರ್,ಪಿ,ಎಲ್ ಸಂಸ್ಥೆ ಮತ್ತು ರಾಮಕೃಷ್ಣ ಮಠ ಮಂಗಳಾದೇವಿ ಮಂಗಳೂರು ಹಾಗೂ ಚೇಳೈರು ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಚೇಳೈರು ಎಂ,ಅರ್,ಪಿ,ಎಲ್ ಕಾಲನಿ ಸಮುದಾಯ ಭವನದಲ್ಲಿ ಅಡುಗೆ ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಮಾಹಿತಿಯನ್ನು ರಾಮಕೃಷ್ಣ ಮಠ ಮಂಗಳಾದೇವಿ ಸಂಪನ್ಮೂಲ ವ್ಯಕ್ತಿ ರಂಜನ್ ಬೆಳ್ಳರಪಾಡಿ ನೀಡಿದರು ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ,ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸದಸ್ಯರುಗಳಾದ ರೇಖಾ,ಸುಕುಮಾರಿ,ಸುಧಾಕರ ಶೆಟ್ಟಿ, ಎಂ,ಅರ್,ಪಿ,ಎಲ್ ಸಂಸ್ಥೆಯ ಸಿ.ಎಸ್,ಅರ್ ವಿಭಾಗದ ಪ್ರಭಂದಕ ಶ್ರೀಶ ಕರ್ಮರನ್,ಎಂ,ಅರ್,ಪಿ,ಎಲ್ ನಿರ್ವಸಿತ ಕಾಲನಿ ಸಮಿತಿ ಕಾರ್ಯ ದರ್ಶಿ ವಿಶ್ವನಾಥ, ಮಾಜಿ ಅಧ್ಯಕ್ಷ ಗಂಗಾಧರ ಪೂಜಾರಿ ಸಾಹಸ್ ಸಂಸ್ಥೆಯ ಸೂರಜ್,ವೆಂಕಟೇಶ ಶೆಟ್ಟಿ, ವಿನಯಸಾಲ್ಯಾನ್,ಸಂತೋಷ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು
Kshetra Samachara
07/07/2022 01:41 pm