ಸುರತ್ಕಲ್:ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಹಮ್ಮಿಕೊಂಡ ಹಿರಿಯ ಚಿತ್ರ ಕಲಾವಿದ ಪಿ ಪುರುಷೋತ್ತಮ ಕಾರಂತರ ಸವಿ ನೆನಪು ಕಾರ್ಯಕ್ರಮ ಖಂಡಿಗೆ ಚೇಳಾಯರು ವಿನ ನಾಟ್ಯಂಜಲಿ ಕಲಾಮಂದಿರದಲ್ಲಿ ಮೂಡಿಬಂದಿತು.
ಕಾರಂತರ ಹಿರಿಯ ಶಿಷ್ಯೆ ಕೆ ಮನೋರಂಜನಿ ರಾವ್ ರವರ 10 ಮಂದಿ ಹಿರಿಯ ಶಿಷ್ಯ ಚಿತ್ರ ಕಲಾವಿದರಾದ ಉಮೇಶ್ ಎಸ್ ಜೆ, ಅಪೂರ್ವ ಅಶ್ವಿನ್ ತಂತ್ರಿ, ವೈಶಾಲಿ ಮಯ್ಯ, ಗಣೇಶ್ ನಾಯಕ್, ಶ್ರೀರಕ್ಷಾ, ಹರೀಶ್ ಕೆ, ಶ್ರಾವ್ಯ, ಗೌರವ್ ದೇವ್, ಶರತ್ ಕುಲಾಲ್ ಹಾಗೂ ಚರಣ್ ಕುಮಾರ್ ಇವರಿಂದ ನಮ್ಮ ಪ್ರಕೃತಿ ಹಾಗೂ ಸಾಂಸ್ಕೃತಿಕ ದರ್ಶನಕ್ಕೆ ಸಂಬಂಧಿಸಿದ ಹತ್ತು ಚಿತ್ರಗಳು ಮೂಡಿಬಂದು ಕಾರಂತರಿಗೆ ವರ್ಣಂಜಲಿಯಾಗಿ ಸಮರ್ಪಣೆ ಗೊಂಡಿತು.
ಕೆ ಮನೋರಂಜನಿ ರಾವ್ ರವರು ಕಾರಂತರ ಸಂಸ್ಮರಣೆ ಮಾಡಿದರು. ಕರ್ನಾಟಕ ಕಲಾ ಶ್ರೀ ಪಿ ಕಮಲಾಕ್ಷ ಆಚಾರ್ ರವರು ಕಲಾವಿದರಿಗೆ ಪ್ರಶಂಸನಾ ಪತ್ರ ವಿತರಿಸಿದರು. ನಾಟ್ಯಂಜಲಿಯ ನಿರ್ದೇಶಕ ಕರ್ನಾಟಕ ಕಲಾ ಶ್ರೀ ಕೆ ಚಂದ್ರಶೇಖರ ನಾವಡರು ಸ್ವಾಗತಿಸಿ ವಂದಿಸಿದರು. ವಿದುಷಿ ಸುಮಂಗಲ ರತ್ನಾಕರವರು ನಿರೂಪಿಸಿದರು.
Kshetra Samachara
05/07/2022 02:48 pm