ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡು: "ಯಕ್ಷಗಾನಕ್ಕೆ ಪ್ರೋತ್ಸಾಹದ ಮೂಲಕ ಕಲೆ ಉಳಿಸಲು ಸಾಧ್ಯ "

ಮುಲ್ಕಿ:ಶ್ರೀ ಧರ್ಮಸ್ಥಾನ ಯುವಕ ವೃಂದ,ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಶ್ರೀ ರಾಮ ಸೇವಾ ಮಂಡಳಿ ಕಾರ್ನಾಡು ಆಶ್ರಯದಲ್ಲಿ ಕಾರ್ನಾಡು ಧರ್ಮಸ್ಥಾನ ದ ವಠಾರದಲ್ಲಿ ಯಕ್ಷಗಾನ ತರಬೇತಿ ಶಿಬಿರವನ್ನು ಪ್ರಾರಂಭಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಯಕ್ಷಗಾನ ತರಬೇತುದಾರರಾದ ಸುರೇಶ್ ಕೊಲಕಾಡಿ ಮಾತನಾಡಿ ಮಕ್ಕಳು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಮುಖಾಂತರ ಕಲೆಯನ್ನು ಉಳಿಸಲು ಸಾದ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ನಾಡ್ ಧರ್ಮಸ್ಥಾನ ಯುವಕ ವೃಂದದ ಅಧ್ಯಕ್ಷ ಪ್ರವೀಣ್, ಮಾಜಿ ಅಧ್ಯಕ್ಷ ದಿವಾಕರ್ ಶ್ರೀ ಹರಿಹರ ಯುವಕ ವೃಂದದ ಕಾರ್ಯದರ್ಶಿ ಶೈಲೇಶ್ ಮಾಜೀ ಅಧ್ಯಕ್ಷ ಸುಧೀರ್ ಶ್ರೀ ರಾಮ ಸೇವಾ ಮಂಡಳಿಯ ಸದಸ್ಯರಾದ ಕೇಶವ್ ಸುವರ್ಣ ಹಾಗೂ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಪಾಂಡು.ಎ.ಕಾರ್ನಾಡು,ಅರ್ಚಕರಾದ ಸದಾನಂದ ಪೂಜಾರಿ, ಹಿರಿಯರಾದ ವಾಸು ಕೋಟ್ಯಾನ್,ಪ್ರದೀಪ್ ಮತ್ತು ಧರ್ಮಸ್ಥಾನ ಯುವಕ ವೃಂದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಯತಿಶ್ ಧನ್ಯವಾದ ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

04/07/2022 07:50 pm

Cinque Terre

2.51 K

Cinque Terre

0

ಸಂಬಂಧಿತ ಸುದ್ದಿ