ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವದಿನಾಚರಣೆಯನ್ನು ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು. ರಾಷ್ಟ್ರ ಸೇವಿಕಾ ಸಮಿತಿಯ ರಾಜಲಕ್ಷ್ಮೀ ಸತೀಶ್ ಕುತ್ಯಾರು ಯೋಗದ ಮಹತ್ವದ ಬಗ್ಗೆ ಮಾತನಾಡಿದರು. ಪ್ರಾಚಾರ‍್ಯೆ ಕುಸುಮಾವತಿ ಉಪಸ್ಥಿತರಿದ್ದರು. ಪುಂಡಲೀಕ ಕೊಟ್ಟಾರಿ ನಿರೂಪಿಸಿದರು. ಕೇಶವ ಹೆಗ್ಡೆ ವಂದಿಸಿದರು.
ಪ್ರೌಢಶಾಲೆಯಲ್ಲಿ ನಡೆದ ಯೋಗದಿನಾಚರಣೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್ ಉದ್ಘಾಟಿಸಿದರು.
ಉಪಪ್ರಾಚಾರ‍್ಯ ಸೋಮಪ್ಪ ಅಲಂಗಾರು, ಶಿಕ್ಷಕರಾದ ಸಾಯಿನಾಥ ಶೆಟ್ಟಿ, ರಾಜಶೇಖರ್, ಪ್ರಥ್ವೀಶ್ ಕರಿಕೆ, ಹರೀಶ್, ಉಮೇಶ್ ನೀಲಾವರ ಮತ್ತಿತರರಿದ್ದರು.
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯನ್ನು ಕಟೀಲು ದೇಗುಲದ ಅರ್ಚಕ ಕಮಲಾದೇವೀಪ್ರಸಾದ ಆಸ್ರಣ್ಣ ಉದ್ಘಾಟಿಸಿದರು. ಉಪನ್ಯಾಸಕ ಸಂತೋಷ ಆಳ್ವ ಪರಿಸರ, ಗಣಿತ, ಭಜನೆ, ಕ್ರೀಡೆ, ಯೋಗ ಸಂಘಗಳನ್ನು ಉದ್ಘಾಟಿಸಿದರು. ಯೋಗ ಶಿಕ್ಷಕ ಹರಿರಾಜ್ ಶೆಟ್ಟಿಗಾರ್ ಯೋಗದ ಮಹತ್ವ ಹೇಳಿದರು. ಯೋಗ ಶಿಕ್ಷಕ ದುರ್ಗಾಪ್ರಸಾದ ಯೋಗ ಪ್ರದರ್ಶನಗಳನ್ನು ಮಾಡಿದರು. ಮುಖ್ಯಶಿಕ್ಷಕರಾದ ಸರೋಜಿನಿ, ಚಂದ್ರಶೇಖರ ಭಟ್, ಶಿಕ್ಷಕರಕ್ಷಕ ಸಂಘದ ಗ್ರೆಗರಿ, ಶಿಕ್ಷಣ ಸಂಸ್ಥೆಗಳ ಪ್ರಬಂಧಕ ವಿಜಯಕುಮಾರ್ ಮತ್ತಿತರರಿದ್ದರು.
ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯನ್ನು ನಿವೃತ್ತ ಉಪನ್ಯಾಸಕ ಸುರೇಶ್ ಉದ್ಘಾಟಿಸಿದರು. ಯೋಗ ಮಹತ್ವದ ಬಗ್ಗೆ ಉಪನ್ಯಾಸಕ ಸಂತೋಷ್ ಆಳ್ವ ಮಾತನಾಡಿದರು. ಪ್ರಾಚಾರ‍್ಯ ಡಾ. ಕೃಷ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
Kshetra Samachara
21/06/2022 05:49 pm