ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ತಾನದ ಜೀರ್ಣೋದ್ದಾರದ ಪ್ರಯುಕ್ತ ಶುಕ್ರವಾರ ಸಂಜೆ ಶ್ರೀ ಸುಬ್ರಹ್ಮಣ್ಯ ದೇವರ ಗರ್ಭ ಶಿಲಾಮಯ ಗುಡಿಯ ನಿಧಿ ಕುಂಭ ಪೂರ್ವಕ ಷಡಾಧಾರ ಪ್ರತಿಷ್ತೆಯು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತ್ರತ್ವದಲ್ಲಿ, ಪ್ರಧಾನ ಅರ್ಚಕರಾದ ಮಧುಸೂದನ ಆಚಾರ್ಯ, ವೇ.ಮೂ. ಪಂಜ ಭಾಸ್ಕರ ಭಟ್, ವಿದ್ವಾನ್ ಸ್ಕಂದ ಪ್ರಸಾದ್ ಭಟ್ ಕಡಂದಲೆ , ಮಧುಸೂದನ್ ತಂತ್ರಿ ಉಡುಪಿ, ರವರ ಉಪಸ್ಥಿತಿಯಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಉಪಾಧ್ಯಕ್ಷರಾದ ಮೋಹನದಾಸ್ , ಗುರುರಾಜ ಎಸ್ ಪೂಜಾರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಗಿರಿ ಪ್ರಕಾಶ್ ತಂತ್ರಿ ಪೊಳಲಿ,ಭುವನಾಭಿರಾಮ ಉಡುಪ, ವ್ಯಾಸರಾವ್ ಚೆನ್ನೈ, ರಾಮಣ್ಣ ದೇವಾಡಿಗ ಮುಂಬೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ್ ಭಟ್ ಸದಸ್ಯರಾದ ವಿಜಯಕುಮಾರ್ ರೈ, ಎಲ್. ಕೆ ಸಾಲಿಯಾನ್, ಪುರುಷೋತ್ತಮ ರಾವ್, ವಿಜಯಕುಮಾರ್ ರೈ, ಯೋಗೀಶ್ ಕೋಟ್ಯಾನ್ ವಿಪುಲ್ ಡಿ ಶೆಟ್ಟಿಗಾರ್, ಶಾರದಾ ಬಂಗೇರ, ವಿಶ್ವನಾಥ್, ದೇವಾಲಯದ ಸಿಬ್ಬಂದಿ ವರ್ಗ ಸ್ಥಳೀಯ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರ ಪರವೂರ ಭಕ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
17/06/2022 08:21 pm