ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ದಿ. ನಾರಾಯಣಶೆಟ್ಟಿ ಯವರು ಅಸಹಾಯಕರ ಹಿತ ಚಿಂತಕರಾಗಿದ್ದರು"

ಮುಲ್ಕಿ:"ದಿ. ನಾರಾಯಣಶೆಟ್ಟಿ ಯವರು ಉದ್ಯಮಿಯಾಗಿ ಬಡವರ ಪಾಲಿನ ಆಶಾಕಿರಣವಾಗಿದ್ದರು ಹಾಗೂ ಅಸಹಾಯಕರ ಹಿತ ಚಿಂತಕರಾಗಿದ್ದರು ಎಂದು ವಿದ್ಯಾಧರ ಶೆಟ್ಟಿ ಕೊಲ್ನಾಡುಗುತ್ತು ಹೇಳಿದರು.

ಅವರು ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆದ ಕೊಲ್ನಾಡುಗುತ್ತು ದಿ. ನಾರಾಯಣ ಶೆಟ್ಟಿ ಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಅಧಾನಿ ಫೌಂಡೇಶನ್ ನ ಕಿಶೋರ್ ಆಳ್ವ, ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಗೌತಮ್ ಜೈನ್ ಮೂಲ್ಕಿ ಅರಮನೆ, ಗ್ರಾಪಂ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಹರಿಪ್ರಸಾದ್ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದು ದಿ. ನಾರಾಯಣ ಶೆಟ್ಟಿ ಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ನಡ್ಚಾಲುಗುತ್ತು,ಕೋಲ್ನಾಡು ಗುತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.ಕಿರಣ್ ಶೆಟ್ಟಿ ಕೊಲ್ನಾಡುಗುತ್ತು ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

08/06/2022 05:14 pm

Cinque Terre

1.74 K

Cinque Terre

0

ಸಂಬಂಧಿತ ಸುದ್ದಿ