ಮಂಗಳೂರು: ನಗರದ ಹೊರವಲಯದ. ದೇರೆಬೈಲು ಕೊಂಚಾಡಿ ಶ್ರೀ ರಾಮಭಜನಾ ಮಂದಿರದಲ್ಲಿ ರಮ್ಯಾಕಲಾ ಆರ್ಟ್ ವತಿಯಿಂದ ರಮ್ಯಾ ಲಕ್ಷ್ಮೀಶ್ ಆಚಾರ್ಯ ರವರು ರಚಿಸಿದ ಹಾಗೂ ತರಬೇತಿ ಪಡೆದ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನವನ್ನು ಸಾರ್ವಜನಿಕ ಮುಕ್ತವಾಗಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.
ಚಿತ್ರಕಲಾ ಪ್ರದರ್ಶನವನ್ನು ಖ್ಯಾತ ಚಿತ್ರ ಕಲಾವಿದರಾದ ಉಡುಪಿಯ ಪಿ.ಎನ್ ಆಚಾರ್ಯ ರವರು ಉದ್ಘಾಟಿಸಿ ಮಾತನಾಡಿ ಕಲೆಯನ್ನು ಕೇವಲ ಹವ್ಯಾಸವಾಗಿ ತೆಗೆದುಕೊಳ್ಳುವುದಲ್ಲದೇ ಅದರೊಂದಿಗೆ ಪೂರ್ಣವಾಗಿ ಬೆರೆತಾಗ ಮಾತ್ರ ಚಿತ್ರಕಲಾ ಸಿದ್ಧಿಯು ಲಭಿಸುವುದು. ಹೆಚ್ಚೆಚ್ವು ಚಿತ್ರಕಲಾವಿದರು ಕಲೆಯಲ್ಲಿ ಪಳಗಿ ಕಲಾಸೇವೆಯನ್ನು ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಚಿತ್ರಕಲಾವಿದ, ಪರಿಸರ ಪ್ರೇಮಿ ದಿನೇಶ್ ಹೊಳ್ಳ, ಮೂಡಬಿದ್ರೆ ಎಸ್ ಎನ್ ಎಮ್ ಪಾಲಿಟೆಕ್ನಿಕ್ ಪ್ರಾಧ್ಯಾಪಕರಾದ ಡಾ. ಗುರುದಾಸ ಮಂಗಳೂರು, ದೇರೆಬೈಲು ಮನಪಾ ಸದಸ್ಯೆ ರಂಜನಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನರವಿ, ಮಂಗಳೂರು ಗಾನಗಂಗೋತ್ರಿ ಸಂಗೀತ ಶಾಲೆಯ ಮುಖ್ಯಸ್ಥರಾದ ರವಿಶಂಕರ್ ಮತ್ತಿತರು ಉಪಸ್ಥಿತರಿದ್ದರು.
ದೂರದರ್ಶನದ ಖ್ಯಾತ ನಿರೂಪಕರಾದ ಎನ್ ಆರ್ ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ರಮ್ಯಾಕಲಾ ಆರ್ಟ್ ನ ಸ೦ಯೋಜಕಿ ರಮ್ಯಾಲಕ್ಷ್ಮೀಶ್ ಆಚಾರ್ಯ ಅವರು ಸ್ವಾಗತಿಸಿದರು. ಸಂದೀಪ್ ಆರ್ ಬಿ ವಂದಿಸಿದರು. ಚಿತ್ರಕಲಾ ವಿದ್ಯಾರ್ಥಿಗಳು ರಚಿಸಿದ ಸುಮಾರು 200ಕ್ಕೂ ಅಧಿಕ ಚಿತ್ರಕಲಾ ಪ್ರದರ್ಶನಗೊಂಡಿತು.
Kshetra Samachara
31/05/2022 12:40 pm