ಮುಲ್ಕಿ:ಜಿಲ್ಲಾ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಲದ ಸಂಯೋಜನೆಯಲ್ಲಿ ಭರತ ನಾಟ್ಯ ನೃತ್ಯ ತರಗತಿಯನ್ನು ಮಂಡಲದ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಹಳೆಯಂಗಡಿ ಗ್ರಾ.ಪಂ.ನ ಅಧ್ಯಕ್ಷೆ ಪೂರ್ಣಿಮಾ ದೀಪವನ್ನು ಬೆಳಗಿಸುವ ಮೂಲಕ ತರಗತಿಯನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ನಾಟ್ಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ವಿಶೇಷ ಮಹತ್ವ ಇದೆ, ಪ್ರಾಚೀನ ಕಲೆಗಾರಿಕೆಯನ್ನು ಮಕ್ಕಳಿಗೆ ತಿಳಿಹೇಳಿದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ತರಗತಿಯ ಭರತನಾಟ್ಯ ಶಿಕ್ಷಕಿ ವಿದುಷಿ ಸ್ವಾತಿ ಸಂಜಯ್ ಸ್ವಾಗತಿಸಿ ಭರತ ನಾಟ್ಯ ತರಗತಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮಹಿಳಾ ಮಂಡಲದ ಅಧ್ಯಕ್ಷೆ ರೇಷ್ಮಾ ಧನ್ಯವಾದ ಅರ್ಪಿಸಿದರು.
Kshetra Samachara
26/05/2022 02:55 pm