ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊಲಕಾಡಿ ಗುತ್ತು ಸಮೀಪದ ಆಲದ ಮರದ ಕೆಳಗೆ ನೆಲೆನಿಂತ ಸುಮಾರು 500 ವರ್ಷಗಳ ಇತಿಹಾಸವಿರುವ ದೈವ ಪಿಲಿಚಂಡಿ ಎಂದು ಹೇಳಲಾದ ಸಂಪೂರ್ಣ ಜೀರ್ಣಾವಸ್ಥೆಯಲ್ಲಿರುವ ದೈವಸ್ಥಾನದ ಅಭಿವೃದ್ಧಿಯ ಬಗ್ಗೆ ಸ್ವರ್ಣ ಪ್ರಶ್ನೆ ಕಾರ್ಯಕ್ರಮ ಜ್ಯೋತಿಷಿ ಹಾಗೂ ಪುರೋಹಿತ ಹೆಬ್ರಿ ರಾಘವೇಂದ್ರ ಭಟ್ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಊರ ಪರವೂರ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
25/05/2022 06:52 pm