ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ ಮಂಗಳೂರು ಇದರ ನೂತನ ಪ್ರಧಾನ ಕಚೇರಿ ಸಂಕೀರ್ಣ ಮತ್ಸ್ಯ ಸಂಪದದ ಶಿಲಾನ್ಯಾಸ ಶುಕ್ರವಾರ ನಡೆಯಿತು.
ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರಿನ ಉರ್ವಾಸ್ಟೋರಿನಲ್ಲಿ ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರ ಸಹಿತ ಕರಾವಳಿಯ ಶಾಸಕರು, ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮೇಯರ್ ಪ್ರೇಮಾನಂದ ಶೆಟ್ಟಿ,ನಾಡೋಜ ಜಿ.ಶಂಕರ್, ಜನಪ್ರತಿನಿಧಿಗಳು, ಗಣ್ಯರು, ಮೊಗವೀರ ಸಮಾಜದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
20/05/2022 12:31 pm