ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರಿನ ಬಾವದ ಮಣ್ಣು ಪಡಂಗದ ಕೊಟ್ಯ (ಗುಡಿ) ದಲ್ಲಿ ನೆಲೆಯಾಗಿರುವ ವರು ಎಂಬ ಮನ್ನಣೆಯನ್ನು ಪಡೆದಿರುವ ಧರ್ಮ ದೈವ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ನೇಮೋತ್ಸವದ ಅಂಗವಾಗಿ ಮದ್ಯಾಹ್ನ 2: 30ಕ್ಕೆ ಚಪ್ಪರ ಏರುವ ಕಾರ್ಯಕ್ರಮ ನಡೆಯಿತು.
ಸಂಜೆ 6ಕ್ಕೆ ಭಂಡಾರ ಇಳಿಯುವುದು, ಮಹಾ ಅನ್ನ ಸಂತರ್ಪಣೆ,ರಾತ್ರಿ 9ರಿಂದ ಗಗ್ಗರ ಸೇವೆ ಹಾಗೂ ದೈವರಾಜ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ಹಾಗೂ ಶ್ರೀ ಧೂಮಾವತಿ ಬಂಟ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿಶ್ವಸ್ಥ ಮನೆಯವರು, ದೈವದ ಗುರಿಕಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
10/05/2022 05:23 am