ಮುಲ್ಕಿ:ಗ್ರಾಮೀಣ ಪ್ರದೇಶದಲ್ಲಿ ಸಂಘ-ಸಂಸ್ಥೆಗಳ ಜನಪರ ಕಾಳಜಿಯ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿಸೋಜ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಶ್ರೀರಾಮ ಭಜನಾ ಮಂದಿರದ ಆವರಣದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್, ಶ್ರೀರಾಮ ಯುವಕ ವೃಂದ( ರಿ) ಗೋಳಿ ಜೋರ , ಲಯನ್ಸ್ ಕ್ಲಬ್ ಕಿನ್ನಿಗೋಳಿ ,ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಕೋಡ್ದಬ್ಬು ದೈವಸ್ಥಾನ ಗೋಳಿ ಜೋರ,ರೋಟರಿ ಕ್ಲಬ್ ಕಿನ್ನಿಗೋಳಿ ,ಕಂಪ್ಯೂಟರ್ ರ್ವರ್ಲ್ಡ್ ಕಿನ್ನಿಗೋಳಿ ಜಂಟಿ ಸಹಯೋಗದಲ್ಲಿ ನಡೆದ ಉಚಿತ ಆಯುಷ್ಮಾನ್ ಕಾರ್ಡ್ ಮತ್ತು ಇ- ಶ್ರಮ ಕಾರ್ಡ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ವೇದಿಕೆಯಲ್ಲಿ ರೋಟರಿಕ್ಲಬ್ ಕಿನ್ನಿಗೋಳಿಯ ದೇವಿದಾಸ್ ಶೆಟ್ಟಿ ,ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಚೇತನ್ ಗೋಳಿಜೋರ ,ಶ್ರೀರಾಮ ಯುವಕ ವೃಂದದ ಅಧ್ಯಕ್ಷ ಪ್ರಕಾಶ್ ಕಿನ್ನಿಗೋಳಿ, ಶಂಕರ್ ಮಾಸ್ಟರ್ ಗೋಳಿಜೋರ , ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಿಬ್ಬಂದಿ ಜೀವನ್ ಗೋಳಿಜೋರ ,ಉದ್ಯಮಿ ಸ್ಟ್ಯಾನಿ ಡಿಸೋಜ ಗೋಳಿಜೊರ ,ಮಾಜಿ ಗ್ರಾಪಂ ಚಂದ್ರಶೇಖರ ಗೋಳಿಜೋರ, l ವೆಂಕಪ್ಪ ಗೋಳಿಜೋರ ಉಪಸ್ಥಿತರಿದ್ದರು.
ಯುವಕ ಸಂಘದ ಅಧ್ಯಕ್ಷ ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ಶ್ರೀಪತಿ ಗೋಳಿಜೋರ ಧನ್ಯವಾದ ಅರ್ಪಿಸಿದರು.
Kshetra Samachara
03/05/2022 10:00 am