ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಅಸಹಾಯಕರಿಗೆ ಬಿರುವೆರ್ ಕುಡ್ಲ ಮೂಲಕ ಸಹಾಯಹಸ್ತದ ಕಾರ್ಯಕ್ರಮ ಯಶಸ್ವಿ"

ಮುಲ್ಕಿ: ಬಿರುವೆರ್ ಕುಡ್ಲ (ರಿ) ಮುಲ್ಕಿ ಘಟಕ ವತಿಯಿಂದ 54ನೇ ಸೇವಾ ಯೋಜನೆಯಲ್ಲಿ ಕಾರ್ನಾಡು ಪಡುಬೈಲ್ ಗ್ರಾಮದ ಸುರೇಖಾ ರವರ ಪುತ್ರ ಶಾಮ್ ನ ನಾಲ್ಕನೇ ತರಗತಿಯ ಶಿಕ್ಷಣಕ್ಕೆ ಧನಸಹಾಯವನ್ನು ಘಟಕದ ಅಧ್ಯಕ್ಷರಾದ ಕಿಶೋರ್ ಜೆ ಸಾಲ್ಯಾನ್ ಚೆಕ್ ಮುಖೇನ ವಿತರಿಸಿದರು.

ಈ ಸಂದರ್ಭ ಅವರು ಮಾತನಾಡಿ ಬಿರುವೆರ್ ಕುಡ್ಲ ಮುಲ್ಕಿ ಘಟಕದ ಸದಸ್ಯರು ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದ ಬಡ ಹಾಗೂ ಹಿಂದುಳಿದ ವರ್ಗದ ಅಸಹಾಯಕರನ್ನು ಗುರುತಿಸಿ ಅನೇಕ ಸಹಾಯಹಸ್ತದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ ಎಂದರು. ಉಪಾಧ್ಯಕ್ಷ ಉಮೇಶ್ ಮಾನಂಪಾಡಿ, ಕಿಶೋರ್ ಅಂಚನ್ , ಕೋಶಾಧಿಕಾರಿ ಅಶೋಕ ಸುವರ್ಣ ಕಿಲ್ಪಾಡಿ, ಸದಸ್ಯರಾದ ಯಾದವ ಕೋಟ್ಯಾನ್, ಕಿರಣ್ ಬರ್ಕೆ ಮತ್ತು ಶಿವಪ್ರಸಾದ್ ಉಪಸ್ಥಿತರಿದ್ದರು ಕಾರ್ಯದರ್ಶಿ ಗಿರಿಧರ ಅಮೀನ್ ವಂದಿಸಿದರು.

Edited By : PublicNext Desk
Kshetra Samachara

Kshetra Samachara

02/05/2022 12:36 pm

Cinque Terre

1.2 K

Cinque Terre

0

ಸಂಬಂಧಿತ ಸುದ್ದಿ