ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರಗಿರಿ: "ಧಾರ್ಮಿಕ ಹಾಗೂ ಸಹಾಯಹಸ್ತ ದ ಮೂಲಕ ಜನ ಸೇವೆ ಶ್ಲಾಘನೀಯ"

ಮುಲ್ಕಿ;ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧಕರಾಗಿ,ಹಲವಾರು ಮಂದಿಗೆ ಅನ್ನದಾತರಾಗಿ,ಆಶಾಕಿರಣರಾಗಿ ಸುಮಾರು 38 ಹೆಣ್ಣುಮಕ್ಕಳ ಮದುವೆ ಮಾಡಿಸಿ ಧಾರ್ಮಿಕ ಕಾರ್ಯ ಮಾಡುತ್ತಾ, ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಅತ್ಯಂತ ಭಕ್ತರಾಗಿದ್ದುಕೊಂಡು ನಮ್ಮೆಲ್ಲರನ್ನಗಲಿದ ದಿವ್ಯಚೇತನವಾದ ರಾಜಮಹಲ್ ರಾಮಣ್ಣ ಅವರನ್ನು ನೆನಪಿಸುವುದು ಶ್ಲಾಘನೀಯ ಎಂದು ಕಟೀಲು ದೇವಸ್ಥಾನದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಕೆಮ್ರಾಲ್ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಾಜಮಹಾಲ್ ರಾಮಣ್ಣನವರ ಬಗ್ಗೆ ಪುಣೆಯ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿಯವರು ಬರೆದಿರುವ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ದೇವಸ್ಥಾನದ ಅರ್ಚಕ ವಿಶೇಶ್ವ ಭಟ್ , ಸಂದರ್ಭ ನ್ಯಾಯವಾದಿ ರತ್ನಾಕರ ಹೆಗ್ಡೆ ಮಟ್ಟಾರು , ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಕಿನ್ನಿಗೋಳಿ, ಕೃತಿಕಾರ ಪಾಂಗಳ ವಿಶ್ವನಾಥ ಶೆಟ್ಟಿ , ನಿಟ್ಟೆ ಚಂದ್ರಶೇಖರ ಶೆಟ್ಟಿ. ಲಲಿತಾ ರಾಮಣ್ಣ ಶೆಟ್ಟಿ , ಪುಪ್ಪಾ ಶೆಟ್ಟಿ , ರಾಜೇಶ್ ಶೆಟ್ಟಿ ಮತ್ತಿತರರು ಇದ್ದರು.

ಶೇಖರ ಶೆಟ್ಟಿ ಪ್ರಸ್ತಾವನೆಗೈದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಟೀಲು ಮೇಳದವರಿಂದ ಶ್ರೀ ದೇವೀ ಮಹಾತ್ಮ್ಯೆ ಯಕ್ಷಗಾನ ಬಯಲಾಟ ಜರಗಿತು.

Edited By : PublicNext Desk
Kshetra Samachara

Kshetra Samachara

29/04/2022 06:06 pm

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ