ಮುಲ್ಕಿ : ಹಿಂದೂ ಸಮಾಜದಲ್ಲಿ ವಿವಿಧ ಪಂಗಡಗಳಿದ್ದರೂ ನಾವು ಹಿಂದುಗಳಾಗಿ ಒಂದಾಗಬೇಕು. ಇದರಿಂದ ಹಿಂದೂ ಸಮಾಜ ಶಕ್ತಿಯುತವಾಗಿರಲು ಸಾಧ್ಯ ಎಂದು ಕಟೀಲು ದೇವಸ್ಥಾನದ ಅರ್ಚಕ ಕೆ. ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಅವರು ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆನೆಗುಂದಿ ವೇದಪಾಠ ಶಾಲೆಯ ಪವನ್ ಶರ್ಮ ಅನುಗ್ರಹ ಸಂದೇಶ ನೀಡಿ ಮಾನವೀಯತೆಯ ಕಾರ‍್ಯ ಭಗವಂತನಿಗೆ ಪ್ರೀತಿ ಎಂದರು.
ಮಂಗಳೂರು ಚಿನ್ನ - ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ಉದ್ಯಮಿ ಎಂ. ಶ್ರೀನಿವಾಸ ಆಚಾರ್ಯ, ಕಿನ್ನಿಗೋಳಿ ಜಿಎಸ್‌ಬಿ ಎಸೋಸಿಯೇಷನ್ ಅಧ್ಯಕ್ಷ ರಾಜೇಶ್ ನಾಯಕ್, ಪಡುಕುತ್ಯಾರ್ ಶ್ರೀ ಸರಸ್ವತಿ ಮಾತೃ ಮಂಡಳಿಯ ಅಧ್ಯಕ್ಷೆ ಸಂಧ್ಯಾ ಲಕ್ಷಣ್ ಆಚಾರ್ಯ, ಉದ್ಯಮಿ ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಕಿನ್ನಿಗೋಳಿ ಸಂಘದ ಗೌರವಾಧ್ಯಕ್ಷ ಕೆ. ಎಸ್. ಉಮೇಶ್, ಸಭಾಭವನ ಸಮಿತಿಯ ಅಧ್ಯಕ್ಷ ಎಂ. ಪೃಥ್ವಿರಾಜ್ ಆಚಾರ್ಯ ಉಪಸ್ಥಿತರಿದ್ದರು.
ಸಾಧಕರ ನೆಲೆಯಲ್ಲಿ ಕಲ್ಲಮುಂಡ್ಕೂರು ಕಾಷ್ಠ ಶಿಲ್ಪಿ ಶಿಲ್ಪಿ ಹರೀಶ್ ಆಚಾರ್ಯ, ತಿಮ್ಮಪ್ಪಯ್ಯ ಆಚಾರ್ಯ ಕೊಡೆತ್ತೂರು, ಮಾಧವ ಆಚಾರ್ಯ ಬಲವಿನ ಗುಡ್ಡೆ, ರೂಪಾ ವಸುಂಧರ ಆಚಾರ್ಯ ಪಡುಬಿದ್ರಿ ಅವರನ್ನು ಗೌರವಿಸಲಾಯಿತು.
ಸಂಘದ ಸದಸ್ಯರಿಗೆ ಮಕ್ಕಳಿಗೆ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಸಂಘದ ಅಧ್ಯಕ್ಷ ಕೆ. ಉದಯ ಕುಮಾರ್ ಆಚಾರ್ಯ ಸ್ವಾಗತಿಸಿದರು. ಮಹಿಳಾ ವೃಂದದ ಅಧ್ಯಕ್ಷೆ ಶುಭಾ ಕೇಶವ ಆಚಾರ್ಯ ವಂದಿಸಿದರು. ಶೈಲಜಾ ಆಚಾರ್ಯ, ಕೀರ್ತನ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
26/04/2022 07:04 am