ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಭಕ್ತಿಪ್ರಧಾನ ಕರ ಸೇವೆಯಿಂದ ದೇವಸ್ಥಾನದ ಅಭಿವೃದ್ಧಿ

ಮುಲ್ಕಿ: ಹಳೆಯಂಗಡಿ ಸಮೀಪದ ಸುಮಾರು 800 ವರ್ಷ ಇತಿಹಾಸ ಇರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ ದ ಅಂಗವಾಗಿ ಊರ ಪರವೂರ ಭಕ್ತರು ಕರಸೇವೆಯಲ್ಲಿ ಪಾಲ್ಗೊಂಡರು.ಕರಸೇವೆಯಲ್ಲಿ ತೋಕೂರು ಎಂ ಆರ್ ಪೂಂಜಾ ಐ ಟಿ ಐ ತಪೋವನದ ಸುಮಾರು 65 ವಿದ್ಯಾರ್ಥಿಗಳು, ಪ್ರಾಂಶುಪಾಲ ಹರಿ ಎಚ್, ಅಧ್ಯಾಪಕ ವೃಂದದವರು ಪಾಲ್ಗೊಂಡರು.

ದೇವಾಲಯದ ಪ್ರಧಾನ ಅರ್ಚಕರಾದ ಮಧುಸುದನ್ ಆಚಾರ್ಯ ದೇವರ ಪ್ರಸಾದ ನೀಡಿ ಮಾತನಾಡಿ ಭಕ್ತಿಪ್ರಧಾನ ಕರ ಸೇವೆಯಿಂದ ದೇವರ ಸೇವೆ ಹಾಗೂ ದೇವಸ್ಥಾನದ ಅಭಿವೃದ್ಧಿ ಸಾಧ್ಯ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ್ ಭಟ್, ಸದಸ್ಯರಾದ ವಿಪುಲ್ ಡಿ ಶೆಟ್ಟಿಗಾರ್, ಮತ್ತು ಜೀರ್ಣೋದ್ಧಾರ ಸಮಿತಿ ಮುಂಬೈ ಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ದೇವಾಡಿಗ ಮತ್ತು ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/04/2022 01:59 pm

Cinque Terre

2.11 K

Cinque Terre

0

ಸಂಬಂಧಿತ ಸುದ್ದಿ