ಮುಲ್ಕಿ: ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೌರಮಾನ ಯುಗಾದಿಯ ದಿನದಂದು ವಸಂತ ಮಾಸದ ವಸಂತ ಪೂಜೆ ಆರಂಭವಾಯಿತು.
ದೇವಸ್ಥಾನದ ಅರ್ಚಕ ನರಸಿಂಹ ಭಟ್ ಹಾಗೂ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ನಡೆಯಿತು.
ಈ ಸಂದರ್ಭ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಸುನಿಲ್ ಆಳ್ವ, ಗೋಪಾಲಕೃಷ್ಣ ಭಟ್, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ದೇವಸ್ಥಾನದಲ್ಲಿ ಸೌರಮಾನ ಯುಗಾದಿಯ ಎಪ್ರಿಲ್ 15ರಿಂದ ವಸಂತ ಪೂಜೆ ಆರಂಭವಾಗಿ ಪತ್ತನಾಜೆ ಮೇ. 24ರವರೆಗೆ ರಾತ್ರಿ ಮಹಾಪೂಜೆ ಬಳಿಕ ನಿರಂತರ ನಡೆಯಲಿದೆ.
Kshetra Samachara
19/04/2022 09:44 am