ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಪಾಂಡವರು ಪೂಜಿಸಿದ ಪುಣ್ಯ ಕ್ಷೇತ್ರ ಕುಂಭಾಶಿ:ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ: ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಆನೆಗುಡ್ಡೆ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಆಧ್ಯಾತ್ಮಿಕ ಗುರು, ಖ್ಯಾತ ಜ್ಯೋತಿಷಿ, ಅಂತಾರಾಷ್ಟ್ರೀಯ ವಾಸ್ತುತಜ್ಞರು ಚಂದ್ರಶೇಖರ ಸ್ವಾಮೀಜಿಯವರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪರಶುರಾಮಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಕುಂಭಾಶಿ ಯೂ ಒಂದಾಗಿದೆ. ಇದನ್ನು ಕೃತ ಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧುಕಾನನವೆಂದೂ, ದ್ವಾಪರಯುಗದಲ್ಲಿ ಗೌತಮ ಕ್ಷೇತ್ರವೆಂದೂ,ಕಲಿಯುಗದಲ್ಲಿ ಕುಂಭಾಶಿ ಯೆಂದು ಕರೆಯುತ್ತಾರೆ. ಈ ಕ್ಷೇತ್ರವು ಅನಾವೃಷ್ಟಿಯಿಂದ ಪೀಡಿತವಾದಾಗ ಗೌತಮ ಮುನಿಗಳು ಇಲ್ಲಿ ನೆಲೆಸಿ ಯಜ್ಞ ಯಾಗಾದಿಗಳನ್ನು ನಡೆಸಿದರು.

ಹೀಗೆ ಈ ಕ್ಷೇತ್ರವು ಯುಗಾಂತರಗಳಿಂದಲೂ ಪವಿತ್ರವಾದುದು ಎಂದು ಪುರಾಣಗಳು ಸಾರುತ್ತವೆ. ಇಂತಹ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದರಿಂದ ನಮ್ಮ ಬದುಕಿಗೆ ಸಕರಾತ್ಮಕ ಶಕ್ತಿ ತುಂಬಲಿದೆ. ಆದುದರಿಂದ ಇಂತಹ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎಂದು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಕ್ಷೇತ್ರದಲ್ಲಿ ವಿಶೇಷ ಪೂಜಿ ಸಲ್ಲಿಸಿದ ಬಳಿಕ ಕ್ಷೇತ್ರದ ಅಭಿವೃದ್ದಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಸ್ವಾಮೀಜಿಯವರನ್ನು ವಿಶೇಷವಾಗಿ ಬರಮಾಡಿ ಕೊಂಡು ದೇವಳದ ವಿಶೇಷಗೌರವ ನೀಡಲಾಯಿತು.

ಆಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರೋಶನಿ ರಾಘವ್ ಸೂರ್ಯ, ರಾಹುಲ್ ಸಿ. ಭಟ್, ರಾಘವ ಸೂರ್ಯ, ಹಿರಿಯ ಟ್ರಸ್ಟಿ ಗಳಾದ ಶ್ರೀ ಸೂರ್ಯನಾರಾಯಣ ಉಪಾಧ್ಯಾಯ, ರಮಣ ಉಪಾಧ್ಯಾಯ, ಅರ್ಚಕರಾದ ನಾಗರಾಜ್ ಉಪಾಧ್ಯಾಯ,ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ, ಸ್ವಾಮೀಜಿಯವರ ಭದ್ರತಾಧಿಕಾರಿಗಳಾದ ಕೆ. ಗಣೇಶ್ ಆಳ್ವ, ಸಂದೇಶ್ ಭಂಡಾರಿ,ಅಶೋಕ್ ಪೂಜಾರಿ, ಭಾಸ್ಕರ್ ಕುಂದಾಪುರ, ಆಶ್ರಮದ ವಕ್ತಾರ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/04/2022 09:48 am

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ