ಮುಲ್ಕಿ: ಯೇಸು ಕ್ರಿಸ್ತರ ಕೊನೆಯ ಭೋಜನದ ದಿನದ ಸ್ಮರಣೆಗಾಗಿ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ಗುರುವಾರ ನಡೆದ ವಿಶೇಷ ಬಲಿಪೂಜೆ ಸಂದರ್ಭದಲ್ಲಿ ಚರ್ಚ್ ಧರ್ಮಗುರು ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ ಜನರಲ್ ಫಾ. ಮೊ. ಮೆಕ್ಷಿಮ್ ನೋರೋನ್ನ ವಿಶೇಷ ಬಲಿ ಪೂಜೆ ನಡೆಸಿಕೊಟ್ಟರು. ಚರ್ಚ್‌ನ ಸಹಾಯಕ ಧರ್ಮಗರು ಫಾ| ವಿಲಿಯಂ ಡಿಸೋಜರವರು 12 ಮಂದಿಯ ಪಾದಗಳನ್ನು ತೊಳೆದರು.
ಈ ಸಂದರ್ಭ ಚರ್ಚ್‌ನ ಸಹಾಯಕ ಧರ್ಮಗುರು ಫಾ| ವಿಲಿಯಂ ಡಿಸೋಜ, ಫಾ| ಲಾನ್ಸಿ ಸಲ್ದಾನ್ , ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಫಾ| ಸ್ಟೇನಿ ಫೆರ್ನಾಂಡಿಸ್, ಕಿನ್ನಿಗೋಳಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಕಾರ್ಯದರ್ಶಿ ವಿನ್ಸ್ಂಟ್ ಮಥಾಯಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/04/2022 08:36 pm