ಮುಲ್ಕಿ:ಕಿನ್ನಿಗೋಳಿ ರಾಮಮಂದಿರದಲ್ಲಿ ರಾಮ ನವಮಿಯ ಅಂಗವಾಗಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಕಿನ್ನಿಗೋಳಿ ರಾಮ ಮಂದಿರದಿಂದ ಬಾಲ ರಾಮನ ವಿಗ್ರಹವನ್ನು ಕಿನ್ನಿಗೋಳಿ ಪೇಟೆಯಲ್ಲಿ ಪಲ್ಲಕ್ಕಿಯಲ್ಲಿ ಮೆರವಣಿಯ ಮೂಲಕ ರಾಮಮಂದಿರಕ್ಕೆ ತಂದು ಬಾಲ ರಾಮದೇವರಿಗೆ ತೊಟ್ಟಿಲು ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಿನ್ನಿಗೋಳಿ ರಾಮ ಮಂದಿರದ ಪ್ರಧಾನ ಆರ್ಚಕ ವೆ. ಮೂ. ಗಿರೀಶ್ ಭಟ್ .ಅರ್ಚಕ ಶಿವಾನಂದ ಭಟ್ ಮೂಲ್ಕಿ , ಜಿಎಸ್‌ಬಿ ಅಸೋಶಿಷೇನ್ ಟ್ರಸ್ಟ್ ( ರಿ ) ಅಧ್ಯಕ್ಷ ರಾಜೇಶ್ ನಾಯಕ್, ಉಪಾಧ್ಯಕ್ಷ ಅದಿತ್ಯ ಕಾಮತ್ , ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ , ಕೋಶಾಽಕಾರಿ ಮಂಜುನಾಥ ಮಲ್ಯ ಟ್ರಸ್ಟಿಗಳಾದ ರಾಘವೇಂದ್ರ ಪ್ರಭು, ರಾಜೇಶ್ ಕಾಮತ್, ಗಣೇಶ್ ಪ್ರಸಾದ್ ಕಾಮತ್ , ನಾಮದೇವ ಕಾಮತ್, ಗುರುದತ್ತ ರಾವ್, ದಾನಿ ನರಸಿಂಹ ಪೈ, ಸಚ್ಚಿದಾನಂದ ಭಟ್ , ಅನಂತ ಕಾಮತ್ , ವೇದಾಂತ್ ಪ್ರಭು, ರಘುವೀರ ಕಾಮತ್, ಮುಕುಂದ ನಾಯಕ್ , ವಿನಾಯಕ ಮಲ್ಯ , ರಂಜನಿ ರಾವ್, ರಾಧಾ ಶೆಣೈ, ಪೂಜಾ ನಾಯಕ್, ಮತ್ತಿತರರರು ಉಪಸ್ಥಿತರಿದ್ದರು.ಈ ಸಂದರ್ಭ ರಾಮ ಮಂದಿರದಕ್ಕೆ ಹಿತ್ತಾಲೆಯ ಹೊದಿಕೆಯ ಪ್ರಧಾನ ದ್ವಾರವನ್ನು ಸಮರ್ಪಿಸಲಾಯಿತು.
Kshetra Samachara
11/04/2022 10:13 pm