ಕೃಷ್ಣಾಪುರ: ಮುಂದಿನ ಒಂದು ವರ್ಷದಲ್ಲಿ 50 ಸಮಾಜಮುಖಿ ಉದಾತ್ತ ಯೋಜನೆಗಳ ಜೊತೆಗೆ 50 ಬಡ ಕುಟುಂಬದ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಚೆಕ್ಕನ್ನು ವಿತರಿಸುತ್ತಿರುವ ಕೃಷ್ಣಾಪುರ ಯುವಕ ಮಂಡಲದ ಯೋಜನೆಗಳು ಶ್ಲಾಘನೀಯ, ಕಾಲಕಾಲದಲ್ಲಿ ಯೋಜನೆಗಳನ್ನು ರೂಪಿಸಿ ಹೊಣೆಗಾರಿಕೆಯಿಂದ ಸಮಾಜಮುಖಿ ಆಲೋಚನೆಗಳು ವಿಸ್ತರವಾಗಬೇಕು, ಪ್ರಧಾನಮಂತ್ರಿಯವರ ನವಭಾರತದ ನಿರ್ಮಾಣದ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಬಲಿಷ್ಠ ಭಾರತವನ್ನು ಕಟ್ಟಿ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು.
ಅವರು ಸುರತ್ಕಲ್ ಸಮೀಪದ ಕೃಷ್ಣಾಪುರ ಕಾಟಿಪಳ್ಳ ಯುವಕ ಮಂಡಲ (ರಿ) ದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ "ಕೃಷ್ಣಾಪುರ ಹಬ್ಬ" ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಸುದರ್ಶನ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಬಿಂದಿಯಾ ಶೆಟ್ಟಿ ಸುರತ್ಕಲ್ ರವರ ಸಾಧನೆಯನ್ನು ಗುರುತಿಸಿ ಜ್ಯೋತಿಷಿ ಕೆ ಸಿ ನಾಗೇಂದ್ರ ಭಾರದ್ವಾಜ್ ಸನ್ಮಾನಿಸಿದರು.
ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ನೂತನ ಮ ನ ಪಾ ನಾಮನಿರ್ದೇಶನ ಸದಸ್ಯ ಪ್ರಶಾಂತ್ ಮುಡಾಯಿಕೋಡಿ, ಮ ನ ಪಾ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕ್ರೀಡಾ ಸ್ಪರ್ಧಾ ವಿಜೇತರಿಗೆ ಮಂಗಳೂರು ಎಸ್ ಇ ಝೆಡ್ ನ ಹಿರಿಯ ಮಹಾ ಪ್ರಬಂಧಕರಾದ ಇಟಾ ಶ್ರೀನಿವಾಸುಲು ಮತ್ತು ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ್ ಆಳ್ವ ಬಹುಮಾನಗಳನ್ನು ವಿತರಿಸಿದರು. ದ ಕ ಜಿಲ್ಲಾ ಬಿ ಜೆ ಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಸಭಾಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಶಿರಸಿ ವೈಭವ್ ಒಕ್ಸಿ ಪ್ಲಸ್ ನ ವಿಜಯ್ ಪ್ರಶಾಂತ್ ಭಟ್, ಎಸ್ ಎಲ್ ಡೈಮಂಡ್ ಹೌಸ್ ನ ಎಂ ರವೀಂದ್ರ ಶೇಟ್, ಯಾದವ್ ಕೋಟ್ಯಾನ್ ಪೆರ್ಮುದೆ, ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Kshetra Samachara
09/04/2022 10:10 am