ಮುಲ್ಕಿ: ಜೀರ್ಣೋದ್ಧಾರದ ಸಂಭ್ರಮದಲ್ಲಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿ. ತೋಕೂರು ಜಂತ್ರಿ ಮನೆ ನಾರಾಯಣ ಸುವರ್ಣ ಸ್ಮರಣಾರ್ಥ ಅವರ ಪುತ್ರ ರಮೇಶ್ ಅಮೀನ್ ರೂ. 50,005 ರೂ ವನ್ನು ದೇಣಿಗೆ ನೀಡಿದರು.
ಈ ಸಂಧರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಮಾತನಾಡಿ ಭಕ್ತರ ಸಹಕಾರದಿಂದ ದೇವಸ್ಥಾನ ಜೀರ್ಣೋದ್ಧಾರಗೊಳ್ಳಲಿದ್ದು ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದರು.
ಅರ್ಚಕ ಮಧುಸೂದನ್ ಆಚಾರ್ಯ,ಮುಂಬಯಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಮಣ್ನ ದೇವಾಡಿಗ,ಮೋಹನ್ ಪೂಜಾರಿ, ಸರಸ್ವತಿ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/04/2022 01:41 pm