ಮುಲ್ಕಿ: ಕಾರ್ನಾಡ್ ಹಿಮಾಯತುಲ್ ಇಸ್ಲಾಮ್ ಸಮಿತಿ (ರಿ) ಆಶ್ರಯದಲ್ಲಿ ಸುಲ್ತಾನುಲ್ ಆರಿಫೀನ್ ಅಶೈಖ್ ಅಹ್ಮದುಲ್ ಕಬೀರ್ ರಿಫಾಯಿ (ಕ.ಸ.ಅ ) ರವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ದಫ್ ರಾತೀಬ್ ನ 45ನೇ ವಾರ್ಷಿಕೋತ್ಸವ ಮತ್ತು ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮದ ಸಮಾರೋಪ ಸಮಾರಂಭವು ಝಿಂದಾ ಮದರ್ ಷಾ ವಲಿಯುಲ್ಲಾ ದರ್ಗಾ ವಠಾರದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮುಲ್ಕಿ ಕೇಂದ್ರ ಶಾಫೀ ಜುಮ್ಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಕಾರ್ನಾಡು ಮಸ್ಜಿದುನ್ನೂರ್ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಇಬ್ರಾಹೀಂ ದಾರಿಮಿ ವಹಿಸಿದ್ದರು.
ದುವಾ ಆಶೀರ್ವಚನವನ್ನು ಅಸೆಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ ಪುತ್ತೂರು ಗೈದರು. ಮುಖ್ಯ ಅತಿಥಿಗಳಾಗಿ ಮುಲ್ಕಿ ಕೇಂದ್ರ ಶಾಪಿ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಂ. ಲಿಯಾಕತ್ ಅಲಿ, ಕಿಲ್ಪಾಡಿ ಜಮಾಅತ್ ಅಧ್ಯಕ್ಷ ಅಫ್ಝಲ್ ಅಹ್ಮದ್, ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಮುಲ್ಕಿ ಹಿಮಾಯತ್ ಇಸ್ಲಾಮ್ ಸಮಿತಿಯ ಅಧ್ಯಕ್ಷ ಕೆ.ಎ. ಇಬ್ರಾಹಿಂ, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಅಸರ್ ಸಮಾಝಿನ ಬಳಿಕ ಮಂಗಳೂರಿನ ವೈದ್ಯಾಧಿಕಾರಿ ಉಸ್ತಾದ್ ಡಾ. ಅಲ್ಹಾಜ್ ಎಂ.ಬಿ. ಮುಹಮ್ಮದ್ ಮಂಜನಾಡಿ ಅವರ ನೇತೃತ್ವದಲ್ಲಿ ಝಿಂದಾ ಮದರ್ ಷಾ ವಲಿಯುಲ್ಲಾ ದರ್ಗಾ ವಠಾರದಲ್ಲಿ ರಿಫಾಯಿ ದಫ್ ರಾತೀಬ್ ನಡೆಯಿತು. ಮಗ್ರಿಬ್ ನಮಾಝಿನ ಬಳಿಕ ದಫ್ ಉಸ್ತಾದ್ ಮುಹಮ್ಮದ್ ಬಶೀರ್ ಕಾಪು ಅವರ ನೇತೃತ್ವದಲ್ಲಿ ಸಂದಲ್ ಮೆರವಣಿಗೆ ನಡೆಯಿತು.
ಹಿಮಾಯತುಲ್ ಇಸ್ಲಾಮ್ ಸಮಿತಿಯ ಅಧ್ಯಕ್ಷ ಕೆ.ಎ. ಇಬ್ರಾಹೀಂ ಸ್ವಾಗತಿಸಿದರು. ಇರ್ಷಾದ್ ಕೆರೆಕಾಡು ಮತ್ತು ಎಂ. ಇಸ್ಮಾಯೀಲ್ ಕೊಲ್ನಾಡು ಕಾರ್ಯಕ್ರಮವನ್ನು ನಿರೂಪಿಸಿದರು.
Kshetra Samachara
28/03/2022 05:27 pm