ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಪೂರ್ವಭಾವಿಯಾಗಿ ಶ್ರೀ ದೇವರ ಬಲಿ ಉತ್ಸವ ಸೇವಾರ್ಥಿ ಗಳಿಂದ ನಡೆಯಿತು.
ಈ ಸಂದರ್ಭ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ, ಅನುವಂಶಿಕ ಮುಕ್ತೇಸರರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ನಾಗೇಶ್ ಬಪ್ಪನಾಡು, ಚಂದ್ರಶೇಖರ್ ಸುವರ್ಣ,ಮುಲ್ಕಿ ಠಾಣಾ ಎಎಸ್ಸೈ ಚಂದ್ರಶೇಖರ್ ಉಪಸ್ಥಿತರಿದ್ದರು.
ಬಪ್ಪನಾಡು ಜಾತ್ರಾ ಮಹೋತ್ಸವ ಮಾರ್ಚ್ 17 ರಿಂದ 24 ರವರೆಗೆ ನಡೆಯಲಿದ್ದು ಮಾ. 23 ಹಗಲು ರಥೋತ್ಸವ, ಶಯನೋತ್ಸವ ಮಾ. 24 ರಂದು ಮಹಾರಥೋತ್ಸವ ನಡೆಯಲಿದೆ.
Kshetra Samachara
17/03/2022 07:15 am