ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಂಜೆ:"ದೇವಸ್ಥಾನದ ಅಭಿವೃದ್ಧಿಯಲ್ಲಿ ಭಕ್ತರ ಪಾತ್ರ ಮಹತ್ವದ್ದು"

ಮುಲ್ಕಿ: ದೇವಸ್ಥಾನದ ಅಭಿವೃದ್ಧಿಯಲ್ಲಿ ಭಕ್ತರು ವಿಶೇಷ ಪಾತ್ರ ವಹಿಸುತ್ತಾರೆ. ಕಲೆಯನ್ನು ಶೃದ್ಧಾಭಕ್ತಿಯಿಂದ ಆರಾಧಿಸುತ್ತಾರೆ" ಎಂದು ಪಾವಂಜೆ ದೇವಸ್ಥಾನದ ವ್ವವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರಶೇಖರ್ ನಾನಿಲ್ ಹೇಳಿದರು.

ಅವರು ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಪಾವಂಜೆ ತುಡರ್ ಕಲಾ ವೇದಿಕೆ ಸದಸ್ಯರು ನೀಡಿದ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಸೂರ್ಯ ಕುಮಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಸುಮಾರು 50 ವರ್ಷಗಳಿಂದ ಸೇವೆ ಮಾಡುತ್ತಿರುವ ಗೋಪಾಲ ದೇವಾಡಿಗ ದಾರೈತೋಟ ಪಾವಂಜೆ ಹಾಗೂ ಬ್ಯಾಂಡ್ ವಾದನ ಮಾಡುತ್ತಿದ್ದ ಹರಿಯಪ್ಪ ಕೋಟ್ಯಾನ್ ರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪಿ.ಗೋಪಾಲಕೃಷ್ಣ ರಾವ್, ರಘು ಕೆ.ದೇವಾಡಿಗ, ಸಿ.ಸುಕುಮಾರ್, ಸುಲೋಚನಾ ಮಹಾಬಲ ಅಂಚನ್, ಜ್ಯೋತಿ ರಾಮಚಂದ್ರ, ಪಾವಂಜೆ ದೇವಾಡಿಗ ಸಂಘದ ಅಧ್ಯಕ್ಷರಾದ ರಾಮದಾಸ್ ಪಾವಂಜೆ, ಕಾರ್ಯದರ್ಶಿ ಜಗದೀಶ್ ಪಲಿಮಾರ್, ಕೋಶಾಧಿಕಾರಿ ಸತೀಶ್ ಎನ್.ಇಂದಿರಾನಗರ, ಯುವ ವೇದಿಕೆಯ ಅಧ್ಯಕ್ಷ ಅಶ್ವಿನ್ ಪಾವಂಜೆ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಯಾದವ ದೇವಾಡಿಗ, ಕಾರ್ಯದರ್ಶಿ ಜನಾರ್ದನ್ ಪಡುಪಣಂಬೂರು, ಕೋಶಾಧಿಕಾರಿ ಅಶೋಕ್ ಪಾವಂಜೆ, ದೇವಾಡಿಗ ಮಹಿಳಾ ವೇದಿಕೆಯ ಅಧ್ಯಕ್ಷ ವಿಮಲ ಕೆ.ದೇವಾಡಿಗ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು

Edited By : PublicNext Desk
Kshetra Samachara

Kshetra Samachara

10/03/2022 07:56 am

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ