ಮುಲ್ಕಿ: ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ದೈವ ಸ್ಥಾನದ ಶ್ರೀ ಜಾರಂದಾಯ ದೈವದ ಗಡು ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಮಾ. 1 ಮಂಗಳವಾರ ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ವಿಶೇಷ ಪ್ರಾರ್ಥನೆ ನಡೆದು ಕುಬೆವೂರು ಗುತ್ತಿನಿಂದ ದೇವಸ್ಥಾನಕ್ಕೆ ಭಂಡಾರ ಹೊರಡುವ ಕಾರ್ಯಕ್ರಮ ನಡೆಯಿತು.
ಸಂಜೆ 6ಗಂಟೆಗೆ ದೈವಸ್ಥಾನದಲ್ಲಿ ದೀಪಾರಾಧನೆ ಬಲಿ ಬಳಿಕ ದೈವಸ್ಥಾನದಿಂದ ಗಡುವಿಗೆ ಭಂಡಾರ ಹೊರಟು ರಾತ್ರಿ ಗಡುವಿನಲ್ಲಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಮಾ.2 ಬುಧವಾರ ಭಂಡಾರ ನಿರ್ಗಮನ ಕಾರ್ಯ ನಡೆಯಿತು. ಈ ಸಂದರ್ಭ ದೈವಸ್ಥಾನ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ, ಮುರಳಿಧರ ಭಂಡಾರಿ, ಅಶ್ವಿನ್ ಆಳ್ವ, ಶಂಭು ಶೆಟ್ಟಿ ಕುಬೆವೂರು, ಅವಿನಾಶ್ ಶೆಟ್ಟಿ ಬರ್ಕೆ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ ದಿವಾಕರ ಶೆಟ್ಟಿ, ವಿಜಯಕುಮಾರ್ ಕುಬೇವೂರು, ಕಿಲ್ಪಾಡಿ ಗ್ರಾಪಂ ಸದಸ್ಯ ವಿಕಾಸ್ ಶೆಟ್ಟಿ, ರಾಜೇಶ್, ಮಾಜಿ ತಾಪಂ ಸದಸ್ಯ ಶರತ್ ಕುಬೆವೂರು, ಉದಯ ಅಮಿನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
Kshetra Samachara
02/03/2022 10:38 am