ಮುಲ್ಕಿ: ಕಾರ್ನಾಡು ಹರಿಹರ ಕ್ಷೇತ್ರದಲ್ಲಿ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ "ಜಾಗರಣಾ ಭಜನೆ" ಕಾರ್ಯಕ್ರಮ ನಡೆಯಿತು.
ಭಜನಾ ಕಾರ್ಯಕ್ರಮಕ್ಕೆ ಕ್ಷೇತ್ರದ ಆಡಳಿತ ಮೊಕ್ತೇಸರ ಅರವಿಂದ ಪೂಂಜಾ ದೀಪಬೆಳಗಿಸಿ ಚಾಲನೆ ನೀಡಿದರು
ಈ ಸಂದರ್ಭ ಎಚ್ ಜಾನಕಿ, ಬಪ್ಪನಾಡು ಯುವಕ ವೃಂದದ ಅಧ್ಯಕ್ಷ ಕೃಷ್ಣಶೆಟ್ಟಿ, ದೇವಸ್ಥಾನದ ಮೊಕ್ತೇಸರ ಶಶೀಂದ್ರ ಸಾಲ್ಯಾನ್, ರಾಘವೇಂದ್ರರಾವ್, ರವಿಕುಮಾರ್, ಯುವಕ ವೃಂದದ ಅಧ್ಯಕ್ಷ ಅಶೋಕ್ ಪಡುಬೈಲು, ಕಾರ್ಯದರ್ಶಿ ಶೈಲೇಶ್ ಶೆಟ್ಟಿ, ಕೋಶಾಧಿಕಾರಿ ಕೇಶವ ಸುವರ್ಣ, ಎಸ್ ಕೆಪಿಎ ಮುಲ್ಕಿ ವಲಯದ ಅಧ್ಯಕ್ಷ ಶಿವರಾಮ್ ಸುವರ್ಣ, ಮಹಿಳಾ ಮಂಡಳಿಯ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.
ಮಹಾ ಶಿವರಾತ್ರಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಮಾ. 3 ರಂದು ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ
Kshetra Samachara
01/03/2022 07:34 pm