ಮುಲ್ಕಿ : ಗ್ರಾಮೀಣ ಕೃಷಿ ಪದ್ದತಿಯಲ್ಲಿ ಅಡಕವಾಗಿರುವ ಸಾಂಪ್ರದಾಯಿಕ ಕ್ರೀಡೆಗಳು ನೇಪಥ್ಯ ಸೇರುತ್ತಿದ್ದು ಅದನ್ನು ಬೆಳಕಿಗೆ ತರುವ ಕಾರ್ಯ ಅಭಿನಂದನೀಯ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು ಕೃಷಿಸಿರಿ ಕೃಷಿ ರಾಜ್ಯ ಸಮ್ಮೇಳನದ ಪೂರ್ವಭಾವಿ ಸರಣಿ ಕಾರ್ಯಕ್ರಮದಲ್ಲಿ ಸಾಂಪ್ರಾದಾಯಿಕ ಕ್ರೀಡೋತ್ಸವದ ಸಮಾರೋಪ ಭಾಷಣ ಮಾಡಿದರು.
ಫಲಿತಾಂಶ
ಲಗೋರಿ ಪ್ರಥಮ: ಹನುಮಾನ್ ಲಗೋರೀಸ್ ಬೋಳೂರು,ದ್ವಿತೀಯ: ವಿದ್ಯಾನಗರ್ ಫ್ರೆಂಡ್ಸ್ ಕ್ಲಬ್ ಬೆಲ್ಲಾಡಿ ಗಳಿಸಿತು.
ಹಗ್ಗ ಜಗ್ಗಾಟ ಪುರುಷರು ಪ್ರಥಮ: ಶಾಸ್ತ ಕದಂಬರು. ದ್ವಿತೀಯ ಎಸ್ಡಿಎಂಎಂ ಪಡ್ರೆ ಪಡೆಯಿತು.
ಹಗ್ಗ ಜಗ್ಗಾಟ ಮಹಿಳೆಯರು ಪ್ರಥಮ: ನ್ಯು ಜನತಾ ಬಾಬು ಗುಡ್ಡೆ. ದ್ವಿತೀಯ: ಯೂತ್ ಕ್ಲಬ್ ಕೋಡಿಕಲ್ ಗಳಿಸಿತು.
ಈ ಸಂದರ್ಭ ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಗಳೂರು ಕ್ರೀಡಾ ಭಾರತಿ ಅಧ್ಯಕ್ಷ ಕಾರ್ಯಪ್ಪ ರೈ, ವಿನಯ ಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ವಿದ್ಯಾಧರ ಶೆಟ್ಟಿ ಕೊಲ್ನಾಡು ಗುತ್ತು, ಪ್ರಮೋದ್ ಕುಡ್ವ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮಮತಾ ಮತ್ತು ಡಾ.ಅಣ್ಣಯ್ಯ ಕುಲಾಲ್, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರಿದ್ದರು.
Kshetra Samachara
01/03/2022 02:53 pm