ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಕುಜಿಂಗಿರಿ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ ಚಂಡಿಕಾಯಾಗ ಮತ್ತು ಸಪರಿವಾರ ಸಹಿತ ರಕ್ತೇಶ್ವರಿ ದೈವದ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು
ನೇಮೊತ್ಸವದ ಪ್ರಯುಕ್ತ ಸಂಜೆ ಭಂಡಾರ ಇಳಿದು ನಂದಿಗೋಣ , ರಕ್ತೇಶ್ವರಿ ನೇಮೋತ್ಸವ ಮತ್ತು ಸತ್ಯದೇವತೆ ವ್ಯಾಘ್ರ ಚಾಮುಂಡಿ ಬಂಟ ದೈವಗಳಿಗೆ ಹಾಗೂ ಗುಳಿಗ ಪಂಜುರ್ಲಿ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ, ರಾಮಮೂರ್ತಿರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಟೇಲ್ ವಾಸುದೇವರಾವ್, ದೇವಪ್ರಸಾದ್ ಪುನರೂರು, ನವೀನ್ ಶೆಟ್ಟಿ, ಅವಿನಾಶ್ ಶೆಟ್ಟಿ ಪುನರೂರು ಗುತ್ತು, ವಿಶ್ವನಾಥ ರಾವ್, ಗೋಪಿನಾಥ ರಾವ್, ಸುಧಾಕರ ರಾವ್ ಮತ್ತಿತರರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
Kshetra Samachara
27/02/2022 09:39 am