ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ರಾತ್ರಿ ಶ್ರೀ ದೇವರ ಉತ್ಸವ ಬಲಿ, ಚಂದ್ರಮಂಡಲ ರಥೋತ್ಸವ, ವಸಂತ ಮಂಟಪದಲ್ಲಿ ಶ್ರೀ ದೇವರನ್ನು ಕುಳ್ಳಿರಿಸಿ ವಿಶೇಷ ಪೂಜೆ ನಡೆಯಿತು
ಈ ಸಂದರ್ಭ ದೇವಸ್ಥಾನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞರು ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಟೇಲ್ ವಿಶ್ವನಾಥ ರಾವ್, ದೇವಪ್ರಸಾದ್ ಪುನರೂರು, ಗೋಪಿನಾಥ ರಾವ್, ರಾಜೇಶ್ ಭಟ್ ಕೆರೆಕಾಡು, ಸುರೇಶ್ ರಾವ್ ನೀರಳಿಕೆ ರವಿ ಶೆಟ್ಟಿ ಪುನರೂರು ಗುತ್ತು,ಮತ್ತಿತರರು ಉಪಸ್ಥಿತರಿದ್ದರು.
ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ರಥೋತ್ಸವ ನಡೆಯಲಿದೆ.
Kshetra Samachara
24/02/2022 06:17 am