ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾವೂರು: 'ಸ್ವಪರಿಶ್ರಮದಿಂದ ಡಾಕ್ಟರೇಟ್ ಪಡೆದ ಡಾ.ಧರ್ಮಪಾಲನಾಥ ಸ್ವಾಮೀಜಿ ಸಾಧನೆ ಅಭಿನಂದನಾರ್ಹ'

ಕಾವೂರು: ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ಮಂಡಿಸಿದ 'ಸಂಸ್ಕೃತ ಸಂಸ್ಕತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿದ್ದು, ಶ್ರೀಗಳನ್ನು ಅಭಿನಂದಿಸಲಾಯಿತು.

ಕಾವೂರು ಬಿಜಿಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ವೈ ಭರತ್ ಶೆಟ್ಟಿ, ಶ್ರೀಗಳು ಗೌರವ ಡಾಕ್ಟರೇಟ್ ಪಡೆಯಲು ಸಾಕಷ್ಟು ಅಧ್ಯಯನ ಮಾಡಿ, ಸ್ವಪರಿಶ್ರಮದಿಂದ ಪಿಎಚ್ ಡಿ ಪಡೆದಿದ್ದಾರೆ.‌ ಅವರು ಎಲ್ಲಿಯೂ ವಿಶೇಷ ಸವಲತ್ತು ಪಡೆಯದೇ ಸಾಮಾನ್ಯ ವಿದ್ಯಾರ್ಥಿಗಳಂತೆ ಕಲಿತು, ಹಗಲು ರಾತ್ರಿ ಸವಾಲು ಸ್ವೀಕರಿಸಿ ಗೌರವ ಪಡೆದುಕೊಂಡಿದ್ದಾರೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ, ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿಎಸ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/01/2022 06:17 pm

Cinque Terre

1.05 K

Cinque Terre

0

ಸಂಬಂಧಿತ ಸುದ್ದಿ