ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಸಮಾಜ ಕಲ್ಯಾಣ ಚೆಕ್ ವಿತರಣೆ‌ ಮತ್ತು ಸಾಧಕರಿಗೆ ಸನ್ಮಾನ

ಮಂಗಳೂರು:ಬಂಟರು ನನಗೆ ರಾಜಕೀಯವಾಗಿ ಶಕ್ತಿ ನೀಡಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ವತಿಯಿಂದ ಮಂಗಳೂರು ಸಂಘದ ಸಭಾಭವನದಲ್ಲಿ ನಡೆದ ಸಮಾಜ ಕಲ್ಯಾಣ ಚೆಕ್ ವಿತರಣೆ‌ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು

ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಕಳೆದ ಮೂರು ವರ್ಷದ ಅವಧಿಯಲ್ಲಿ ಒಟ್ಟು ಸುಮಾರು 9 ಕೋಟಿ ರೂಪಾಯಿ ಸಹಾಯ ಧನ ನೀಡಲಾಗಿದೆ, ಒಟ್ಟು 9 ಕೋಟಿಗಿಂತಲೂ ಹೆಚ್ಚು, ಇಂದು 29 ಲಕ್ಷ. 198 ಬೇರೆ ಸಮೂದಾಯ ಸಹಕಾರ, 198 ಮಂದಿಗೆ ಬೇರೆ ಸಮೂದಾಯದವರಿಗೂ ಸಹಾಯ ನೀಡಲಾಗಿದ್ದು ಇಂದೂ ಕೂಡ 29 ಲಕ್ಷ ರೂಪಾಯಿ ಧನ ಸಹಾಯ ನೀಡಲಾಗುತ್ತಿದೆ, ಇದ್ದವರ ಬಳಿಯಿಂದ ತಂದು ಇಲ್ಲದವರಿಗೆ ಕೊಟ್ಟ ಅವರ ಕಣ್ಣೀರೊರೆಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಾಸ್ಕರ ರೈ ಕುಕ್ಕುವಳ್ಳಿ, ಕದ್ರಿ ನವನೀತ್ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರದೀಪ್ ಕುಮಾರ್ ರೈ, ಸಾಯಿನಾಥ ಶೆಟ್ಟಿ ಮುಂಡ್ಕೂರು, ಡಾ. ನಿತ್ಯಾನಂದ ಶೆಟ್ಟಿ, ಡಾ. ಸುಧಾರಾಣಿ, ಕು ಸಾನ್ವಿ ರವರನ್ನು ಸನ್ಮಾನಿಸಲಾಯಿತು.

.

ಈ ಸಂದರ್ಭ ಉದ್ಯಮಿ ತೋನ್ಸೆ ಆನಂದ್ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಮಾಜಿ ಮೇಯರ್ ದಿವಾಕರ್, ಕಾರ್ಪೊರೇಟರ್ ಮನೋಹರ್, ಸಂಘದ ಮೊಹನ್ ದಾಸ್ ಶೆಟ್ಟಿ ಉಳ್ತೂರು, ಸತೀಶ್ ಅಡಪ ಮತ್ತಿತರರು ಉಪಸ್ಥಿತರಿದ್ದರು.

ಜಾಗತಿಕ ಬಂಟರ ಸಂಘದ ಇಂದ್ರಾಳಿ ಜಯಕರ ಶೆಟ್ಟಿ ಪ್ರಸ್ತಾವನೆಗೈದರು, ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು, ನವೀನ್ ಶೆಟ್ಟ ಎಡ್ಮೆಮಾರ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

28/01/2022 07:10 pm

Cinque Terre

4.09 K

Cinque Terre

0

ಸಂಬಂಧಿತ ಸುದ್ದಿ