ಸುರತ್ಕಲ್:ಆಂಧ್ರಪ್ರದೇಶ ವಿಶಾಖಪಟ್ಟಣದ ಸ್ವರ್ಣ ಭಾರತಿ ಕ್ರೀಡಾಂಗಣದಲ್ಲಿ ಜ.8,9 ರಂದು ನಡೆದ 5 ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್-2022 ರ ಸ್ಪರ್ಧೆಯಲ್ಲಿ ಪಡುಪಣಂಬೂರಿನ ಧೀರಜ್ ಆಚಾರ್ಯ ಅವರು 50 ಕೆಜಿ ಪುರುಷರ ವೈಯುಕ್ತಿಕ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 16 ವರ್ಷದೊಳಗಿನ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಶ್ರೇಷ್ಠ ನಿರ್ವಹಣೆ ಸಾಧನೆಗೈದ ಅವರನ್ನು ಪಣಂಬೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ 7ನೇ ವಿಭಾಗ ಕೃಷ್ಣಾಪುರ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಭವಾನಿ ಶಂಕರ್ ಆಚಾರ್ಯ, ಪಿಕೆ ದಾಮೋದರ ಆಚಾರ್ಯ, ಸುಧಾಕರ ಆಚಾರ್ಯ, ವೆಂಕಟೇಶ್ ಹೊಸಬೆಟ್ಟು, ಲಕ್ಷ್ಮಣ ಆಚಾರ್ಯ ಕಾಟಿಪಳ್ಳ, ಯಜ್ನೇಶ್ವರ ಆಚಾರ್ಯ, ಚಿದಾನಂದ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಸುಮತಿ ದಾಮೋದರ ಆಚಾರ್ಯ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
17/01/2022 10:18 pm