ಕಟೀಲು:ಪ್ರತಿಯೊಂದು ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ, ಅದನ್ನು ಹೊರಹಾಕಲು ಸತತ ಐದು ವರುಷಗಳಿಂದ ಪುನರೂರು ಪ್ರತಿಷ್ಠಾನವು ಪ್ರತಿಭಾ ಸೌರಭದ ಮೂಲಕ ಪ್ರೌಢಶಾಲಾ ಮಕ್ಕಳಿಗೆ ಅವಕಾಶ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನವಾಗಿದೆ ಎಂದು ಉಡುಪಿ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ ಅಧ್ಯಕ್ಷರಾದ ಜನಾರ್ಧನ್ ಕೊಡವೂರು ಹೇಳಿದರು.
ಪುನರೂರು ಪ್ರತಿಷ್ಠಾನ(ರಿ.) ಆಶ್ರಯದಲ್ಲಿ ಹಾಗೂ ಜನವಿಕಾಸ ಸಮಿತಿ ಮುಲ್ಕಿ ಸಹಕಾರದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೂತ್ಸಾಹಿಸುವ ಸಲುವಾಗಿ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಂಗಣದಲ್ಲಿ ಜರುಗಿದ ಪ್ರತಿಭಾ ಸೌರಭ- 2021ನ್ನು ಉದ್ಘಾಟಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನ(ರಿ)ನ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧಕ್ಷತೆ ವಹಿಸಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕರಾದ ಗೋಪಾಲಕೃಷ್ಣ ಆಸ್ರಣ್ಣರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಕರ್ನಾಟಕ ಬ್ಯಾಂಕ್ ಕಟೀಲು ಶಾಖೆಯ ಶಾಖಾ ಪ್ರಬಂದಕ ಮಿಥುನ್ ಆಚಾರ್ಯ, ಪುನರೂರು ಪ್ರತಿಷ್ಠಾನ(ರಿ) ಗೌರವಾಧ್ಯಕ್ಷೆ ಎಚ್.ಕೆ ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿ ಮುಲ್ಕಿಯ ಅಧ್ಯಕ್ಷ ಪ್ರಾಣೇಶ್ ಭಟ್ ದೇಂದಡ್ಕ ಹಾಗೂ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನ(ರಿ) ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿ ಜನವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಮೋದರ ಶೆಟ್ಟಿ ಕೊಡೆತ್ತೂರು ವಂದಿಸಿದರು ಹಾಗೂ ಜಿತೇಂದ್ರ ವಿ.ರಾವ್ ಹೆಜಮಾಡಿ ನಿರೂಪಿಸಿದರು.
ಮುಲ್ಕಿ ಹೋಬಳಿಯ ಒಟ್ಟು 25 ಪ್ರೌಢಶಾಲೆಯ 486 ವಿದ್ಯಾರ್ಥಿಗಳು ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಕಸದಿಂದರಸ ಸ್ಪರ್ಧೆಯಲ್ಲಿ ಭಾಗವಹಿಸಿದರು.
Kshetra Samachara
12/12/2021 09:40 am